Wednesday, July 15, 2026
Homeತಾಜಾ ಸುದ್ದಿಅಲ್‌ ಖೈದಾ ಮುಖ್ಯಸ್ಥನ ಹತ್ಯೆ: 9/11 ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆಗೈಯುವಲ್ಲಿ ಅಮೆರಿಕಾ ಯಶಸ್ವಿ

ಅಲ್‌ ಖೈದಾ ಮುಖ್ಯಸ್ಥನ ಹತ್ಯೆ: 9/11 ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆಗೈಯುವಲ್ಲಿ ಅಮೆರಿಕಾ ಯಶಸ್ವಿ

- Advertisement -
- Advertisement -

ಕಾಬುಲ್‌ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ, ಸೆಪ್ಟೆಂಬರ್ 11, 2001ರ ವಿಶ್ವ ವಾಣಿಜ್ಯ ಸಂಸ್ಥೆ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಹತ್ಯೆ ಮಾಡಿದೆ.

9/11 ದಾಳಿ ನಡೆದ ಬರೋಬ್ಬರಿ 21 ವರ್ಷಗಳ ಬಳಿಕ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಜವಾಹಿರಿಯನ್ನು ಕೊಲೆಗೈಯುವಲ್ಲಿ ಅಮೆರಿಕ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.

ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಬೈಡನ್, ಶನಿವಾರ ಕಾಬೂಲ್‌ನಲ್ಲಿ ನಡೆಸಲಾದ ದಾಳಿಯಲ್ಲಿ ಝವಾಹಿರಿ ಹತನಾಗಿದ್ದಾನೆ ಎಂದು ಹೇಳಿದ್ದಾರೆ. ಆತನ ವಿರುದ್ಧದ ಕಾರ್ಯಾಚರಣೆಗೆ ಅಂತಿಮ ಅನುಮೋದನೆ ನೀಡಿದ್ದೆ. ದಾಳಿಯಲ್ಲಿ ನಾಗರಿಕರ ಹತ್ಯೆಯಾಗಿಲ್ಲ. ಇದೀಗ ನ್ಯಾಯ ಒದಗಿಸಲಾಗಿದೆ. ಉಗ್ರ ಸಂಘಟನೆ ನಾಯಕ ಇನ್ನಿಲ್ಲ’ ಎಂದು ಬೈಡನ್ ಹೇಳಿದ್ದಾರೆ.

- Advertisement -

Latest News

error: Content is protected !!