Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ತಾಯಿ ಸಿಂಧೂದೇವಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ :ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ತಾಯಿ ಸಿಂಧೂದೇವಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಳ್ತಂಗಡಿ : ಪಂಜಾಬ್ ನಲ್ಲಿ ಧರ್ಮಸ್ಥಳ ಬೊಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಆಕಾಂಕ್ಷ ಎಸ್ ನಾಯರ್(22) ಪಂಜಾಬ್ ನಲ್ಲಿ ಕಾಲೇಜ್ ಕಟ್ಟಡದಿಂದ ಮೇ.17 ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಕ್ಷಣ ಅಂದೆ ತಂದೆ-ತಾಯಿ ಹಾಗೂ ಕುಟುಂಬದವರು ಪಂಜಾಬ್ ರಾಜ್ಯದ ಜಲಂಧರ್ ತಾಲೂಕಿನ ಪಗ್ವಾರ ಪೊಲೀಸ್ ಠಾಣೆ ಮತ್ತು ಮೃತದೇಹ ಇದ್ದ ಆಸ್ಪತ್ರೆಗೆ ಹೋಗಿ ಕಾನೂನು ಪ್ರಕ್ರಿಯೆ ಮುಗಿಸಿದ್ದು. ಮೃತದೇಹ ಧರ್ಮಸ್ಥಳ ಬೊಳಿಯರ್ ಮನೆಗೆ ಮೇ.21 ರಂದು ಬೆಳಗ್ಗೆ ತೆಗೆದುಕೊಂಡು ಬರಲಿದ್ದಾರೆ.

 ತಾಯಿ ಸಿಂಧೂದೇವಿ ಮೇ.19 ರಂದು ಪಂಜಾಬ್ ನಿಂದ ಬೊಳಿಯರ್ ಮನೆಗೆ ವಾಪಸ್ ಅಗಿದ್ದು ಮಗಳ ಸಾವಿನ ನೋವಿನಿಂದ ಊಟ ಮಾಡದೆ ಅಸ್ವಸ್ಥರಾಗಿದ್ದು ಉಜಿರೆ ಬೆನಕ ಆಸ್ಪತ್ರೆಗೆ ಮೇ.20 ರಂದು ಮನೆಯವರು ‌ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

- Advertisement -

Latest News

error: Content is protected !!