Friday, August 12, 2022
Homeಕರಾವಳಿಅಜ್ಜಾವರ: ಸೇವಾಭಾರತಿ ವತಿಯಿಂದ 1000 ಕ್ಕೂ ಹೆಚ್ಚಿನ ದಿನಸಿ ಕಿಟ್ ವಿತರಣೆ

ಅಜ್ಜಾವರ: ಸೇವಾಭಾರತಿ ವತಿಯಿಂದ 1000 ಕ್ಕೂ ಹೆಚ್ಚಿನ ದಿನಸಿ ಕಿಟ್ ವಿತರಣೆ

- Advertisement -
- Advertisement -

ಅಜ್ಜಾವರ: ಕೊರೋನ ರೋಗದಿಂದಾಗಿ ಲಾಕ್ ಡೌನ್ ಪ್ರಾರಂಭವಾದ ಮೇಲೆ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಸುಳ್ಯ ತಾಲೂಕು, ಅಜ್ಜಾವರ ಗ್ರಾಮದಲ್ಲಿ ಸೇವಾಭಾರತಿ ವತಿಯಿಂದ 1000 ಕ್ಕೂ ಹೆಚ್ಚಿನ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಅಜ್ಜಾವರ ಗ್ರಾಮದಲ್ಲಿ ಅತ್ಯಧಿಕ ಪರಿಶಿಷ್ಟ ಜಾತಿ-ಪಂಗಡದ ಜನರು ಮತ್ತು ತಮಿಳು ಮಾತನಾಡುವ ಜನತೆ ಹಾಗೂ ಇತರ ವರ್ಗದ ಕಡುಬಡವರು ಇದ್ದು, ಆ ಪೈಕಿ ಬಹುತೇಕ ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಒದಗಿಸಲಾಯಿತು.

ಪಡಿತರ ಚೀಟಿ ಇಲ್ಲದ ಮತ್ತು ತೊಂದರೆಗೊಳಗಾದ ಬಡವರಿಗೆ ಅಕ್ಕಿ ಅಥವಾ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.

ಮಾನ್ಯ ಸಂಸದರ ಹಾಗೂ ಶಾಸಕರ ಸಹಕಾರದಿಂದ ಶಾಸಕರ ವಾರ್ ರೂಮ್ ಮತ್ತು ಸುಳ್ಯ ಸೇವಾಭಾರತಿ ಕಛೇರಿಯ ಮುಖಾಂತರ ನಮಗೆ ಬಹಳಷ್ಟು ಆಹಾರ ಕಿಟ್ ಗಳ ಪೂರೈಕೆಯಾಗಿದೆ. ಸಿಎ ಬ್ಯಾಂಕ್ ಸುಳ್ಯ ಮತ್ತು ಊರ ಸಹೃದಯಿ ದಾನಿಗಳ ಸಹಕಾರದಿಂದ ಹಾಗೂ ಕಾರ್ಯಕರ್ತರ ಸೇವಾ ಮನೋಭಾವದಿಂದ ನಮ್ಮ ಈ ರೀತಿಯ ಬೃಹತ್ ಸೇವಾ ಕಾರ್ಯವನ್ನು ನಡೆಸಲು ಸಾಧ್ಯವಾಯಿತು ಎಂದು ಸೇವಾಭಾರತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -
- Advertisment -

Latest News

error: Content is protected !!