Saturday, June 6, 2026
Homeಕರಾವಳಿಉಡುಪಿಕರಾವಳಿಯಲ್ಲಿ ಈ ಐಶ್ವರ್ಯಾಳದ್ದೇ ಹವಾ.. : ವೈರಲ್ ಆಯ್ತು ಐಶ್ವರ್ಯಾ ಬಂದ್ಲು ಮೇಕಿಂಗ್ ವಿಡಿಯೋ

ಕರಾವಳಿಯಲ್ಲಿ ಈ ಐಶ್ವರ್ಯಾಳದ್ದೇ ಹವಾ.. : ವೈರಲ್ ಆಯ್ತು ಐಶ್ವರ್ಯಾ ಬಂದ್ಲು ಮೇಕಿಂಗ್ ವಿಡಿಯೋ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಎಂತಹ ಪ್ರತಿಭೆಗಳಿದ್ದಾರೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಕೆಲವೊಮ್ಮೆ ಕೆಲವೊಂದು ಸ್ಪೆಷಲ್ ವಿಡಿಯೋಗಳನ್ನು  ನೋಡುವಾಗ ಇವರೆಲ್ಲ ಎಲ್ಲಿದ್ರಪ್ಪಾ ಅನ್ನೋ ಪ್ರಶ್ನೆ ಮೂಡೋದು ಸಹಜ. ಹೀಗೆ ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಸಖತ್ ವೈರಲ್ ಆಗ್ತಿದೆ. ಅದು ಬೇರಾವುದೂ ಅಲ್ಲ ಐಶ್ವರ್ಯಾ ಬಂದ್ಲು ಅನ್ನೋ ಮಕ್ಕಳ ವಿಡಿಯೋ..

ಸುಮಾರು 30 ಸೆಕೆಂಡ್ ಗಳಷ್ಟಿರುವ ಈ ವಿಡಿಯೋ ಮಾಡಿದ ಸೌಂಡ್ ಅಷ್ಟಿಷ್ಟಲ್ಲ. ಕರಾವಳಿಯ ಪುಟಾಣಿ ಹುಡುಗರ ಗ್ಯಾಂಗ್ ಮಾಡಿರುವ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ವಾಟ್ಸಾಫ್, ಫೇಸ್ ಬುಕ್ , ಇನ್ಸ್ಟಾಗ್ರಾಂಗಳಲ್ಲಿ ರಾರಾಜಿಸುತ್ತಿದೆ. ಇದರ ಮಧ್ಯೆ ಇದೀಗ ಇದರ ಮೇಕಿಂಗ್ ವಿಡಿಯೋ ಕೂಡ ರಿಲೀಸ್ ಆಗಿದ್ದು ಇದು ಸಖತ್ ಮಜಾವಾಗಿದೆ. ನೋಡಿದವರ ಮುಖದಲ್ಲಿ ಈ ವಿಡಿಯೋ ನಗು ಮೂಡಿಸದೇ ಇರೋದಿಲ್ಲ.

- Advertisement -

Latest News

error: Content is protected !!