Sunday, August 16, 2026
Homeಉದ್ಯಮಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಘೋಷಿಸಿದ ಏರ್ ಇಂಡಿಯಾ

ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಘೋಷಿಸಿದ ಏರ್ ಇಂಡಿಯಾ

- Advertisement -
- Advertisement -

ಮಂಗಳೂರು: ಮೈಸೂರು–ಮಂಗಳೂರು ನಡುವೆ ಡಿ. 10ರಿಂದ ಮೊದಲ ಬಾರಿಗೆ ಏರ್‌ ಇಂಡಿಯಾ ವಿಮಾನ ಹಾರಾಟ ನಡೆಸಲಿದ್ದು, ಕರಾವಳಿ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಸ್ಥಾಪನೆಯಾಗಿ 10 ವರ್ಷಗಳ ಬಳಿಕ ಮೈಸೂರಿನಿಂದ ಮಂಗಳೂರಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ. ಮೈಸೂರಿನಿಂದ ಮೊದಲ ವಿಮಾನ ಡಿಸೆಂಬರ್ 10 ರಂದು ಬೆಳಗ್ಗೆ 11-15ಕ್ಕೆ ನಿರ್ಗಮಿಸಿ ಮಧ್ಯಾಹ್ನ 12-15ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 12-40ಕ್ಕೆ ಹೊರಡಲಿರುವ ವಿಮಾನ ಮಧ್ಯಾಹ್ನ 1-40ಕ್ಕೆ ಮೈಸೂರು ತಲುಪಲಿದೆ.

ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಹಾರಾಟ ನಡೆಸಲಿವೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.

- Advertisement -

Latest News

error: Content is protected !!