Saturday, June 6, 2026
Homeಕರಾವಳಿಮಂಗಳೂರುಅಹಮದಾಬಾದ್ ನಲ್ಲಿ ವಿಮಾನ  ದುರಂತ ಪ್ರಕರಣ: ವಿಮಾನದಲ್ಲಿದ್ದ ಮಂಗಳೂರು ಮೂಲದ ಕೋ ಪೈಲೆಟ್  ಕ್ಲೈವ್ ಕುಂದರ್

ಅಹಮದಾಬಾದ್ ನಲ್ಲಿ ವಿಮಾನ  ದುರಂತ ಪ್ರಕರಣ: ವಿಮಾನದಲ್ಲಿದ್ದ ಮಂಗಳೂರು ಮೂಲದ ಕೋ ಪೈಲೆಟ್  ಕ್ಲೈವ್ ಕುಂದರ್

- Advertisement -
- Advertisement -

ಅಹಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಂಗಳೂರು ಮೂಲದ ಕೋ ಪೈಲೆಟ್  ಕ್ಲೈವ್ ಕುಂದರ್ ಸಾವನ್ನಪ್ಪಿದ್ದಾರೆ.

ಮಂಗಳೂರು ಮೂಲದ ಮುಂಬೈ ನಿವಾಸಿ ಪೈಲಟ್ ಕ್ಲೈವ್ ಕುಂದರ್  ಅವರು ಪ್ಯಾರಿಸ್ ಏರ್ ಇಂಕ್‌ನಲ್ಲಿ ತರಬೇತಿ ಪಡೆದಿದ್ದರು. ಕ್ಲೈವ್ ಅವರು 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. 8,200 ಕ್ಕೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು.

ಬೋಯಿಂಗ್ 787 ವಿಮಾನವು ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ವಿಮಾನ ಟೇಕಾಫ್ ಆದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ ‘ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು ಎನ್ನಲಾಗಿದೆ.

- Advertisement -

Latest News

error: Content is protected !!