Friday, June 5, 2026
Homeತಾಜಾ ಸುದ್ದಿಮುರುಘಾ ಶ್ರೀಗಳಿಗೆ‌ ಮತ್ತೊಂದು ಸಂಕಷ್ಟ; ಸ್ವಾಮೀಜಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಮತ್ತಿಬ್ಬರು ಬಾಲಕಿಯರು

ಮುರುಘಾ ಶ್ರೀಗಳಿಗೆ‌ ಮತ್ತೊಂದು ಸಂಕಷ್ಟ; ಸ್ವಾಮೀಜಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಮತ್ತಿಬ್ಬರು ಬಾಲಕಿಯರು

- Advertisement -
- Advertisement -

ಮೈಸೂರು: ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲು ಪಾಲಾಗಿರುವ  ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇದೀಗ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರಿಗೆ ಅಂತಹದ್ದೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಮಠದಲ್ಲಿ‌ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಶ್ರೀಗಳ ವಿರುದ್ಧ ನಿನ್ನೆ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದರಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು, ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು. ಸದ್ಯ ಜೈಲಿನಲ್ಲಿರುವ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

- Advertisement -

Latest News

error: Content is protected !!