Friday, June 26, 2026
Homeಕರಾವಳಿಬೆಳ್ತಂಗಡಿ: ನಾಳೆ ವಕೀಲ ಯತೀಶ್ ಶೆಟ್ಟಿಯವರ ನೂತನ ಕಚೇರಿ ಶುಭಾರಂಭ

ಬೆಳ್ತಂಗಡಿ: ನಾಳೆ ವಕೀಲ ಯತೀಶ್ ಶೆಟ್ಟಿಯವರ ನೂತನ ಕಚೇರಿ ಶುಭಾರಂಭ

- Advertisement -
- Advertisement -

ಬೆಳ್ತಂಗಡಿ ಆ-29: ವಕೀಲ ಯತೀಶ್ ಶೆಟ್ಟಿಯವರ ನೂತನ ಕಚೇರಿಯೂ ಬೆಳ್ತಂಗಡಿಯ ಕೋರ್ಟ್ ರಸ್ತೆಯಲ್ಲಿರುವ ಧರ್ಮಶ್ರೀ ಕಟ್ಟಡದ ಮೊದಲ ಮಹಡಿಯಲ್ಲಿ ನಾಳೆ ಮದ್ಯಾಹ್ನ ಶುಭಾರಂಭಗೊಳ್ಳಲಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲನಗೊಳಿಸುವ ಮೂಲಕ ಕಚೇರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಹಾಗೂ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಬೆಂಗಳೂರು ಹೈಕೋರ್ಟ್ ನ ನ್ಯಾಯವಾದಿ ಪಿ ಕರುಣಾಕರ್, ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಪ್ರಸಾದ್ ಕೆ.ಎಸ್ ಭಾಗವಹಿಸಲಿದ್ದಾರೆ.

ಯತೀಶ್ ಶೆಟ್ಟಿಯ ಪರಿಚಯ:
ಯತೀಶ್ ಶೆಟ್ಟಿ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪಣಿಕ್ಕರದವರಾಗಿದ್ದು ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದವರು, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮಂಗಳೂರು ವಿ ವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಎಬಿವಿಪಿ ತಾಲೂಕು ಸಂಚಾಲಕರಾಗಿ, ಜಿಲ್ಲಾ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

ಇವರು ಪ್ರಸ್ತುತ ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಇವರು ಕರ್ನಾಟಕ ಹೈ ಕೋರ್ಟ್ ಬೆಂಗಳೂರಿನಲ್ಲಿ ವಕೀಲೀ ವೃತ್ತಿ ಆರಂಭಿಸಿದ್ದು ಪ್ರಸ್ತುತ ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!