Saturday, June 6, 2026
Homeಕರಾವಳಿಉಡುಪಿಆದರ್ಶ ಟ್ರೋಪಿ-2021 ಗೆದ್ದು ಬೀಗಿದ ಶೆಟ್ಟಿ ಕ್ರಿಕೆಟರ್ಸ್ ಸೂಡ

ಆದರ್ಶ ಟ್ರೋಪಿ-2021 ಗೆದ್ದು ಬೀಗಿದ ಶೆಟ್ಟಿ ಕ್ರಿಕೆಟರ್ಸ್ ಸೂಡ

- Advertisement -
- Advertisement -

ಸೂಡ : ಆದರ್ಶ ಪ್ರೆಂಡ್ಸ್ ಮಕ್ಕೇರಿಬೈಲು ಸೂಡ ಸಂಘದ ನೇತೃತ್ವದಲ್ಲಿ ನಡೆದ 8 ನೇ ವರ್ಷದ 40 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಶರದ್ ಶೆಟ್ಟಿ ದುಬೈ ಮಾಲಕತ್ವದ ಶೆಟ್ಟಿ ಕ್ರಿಕೆಟರ್ಸ್ ಸೂಡ ತಂಡವು ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತು. ದ್ವಿತೀಯ ಸ್ಥಾನಿಯಾಗಿ ಇರಂದಾಡಿ ಪ್ರೆಂಡ್ಸ್ ಇರಂದಾಡಿ ತಂಡವು ಗೆದ್ದಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿಯಾದ ಶ್ರೀ ರಿತೇಶ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೇಮನಾಥ ಆಚಾರ್ಯ ಸಿದ್ದಿಗುರಿ, ಅನಿತಾ ಕಸ್ತಲೀನೋ ಕೊರಜೆ, ಸೂರಜ್ ಕೋಟ್ಯಾನ್, ಉದಯ ಆಚಾರ್ಯ ಪಳ್ಳಿ, ಸಹನಾ ಕುಂದರ್ ಸೂಡ , ವಾರಿಜ ಸಾಲಿಯಾನ್, ಕಿರಣ್ ಸೂಡ, ಸಂಘದ ಕ್ರೀಡಾ ಕಾರ್ಯದರ್ಶಿ ಚಂದ್ರಹಾಸ ಆಚಾರ್ಯ, ಸಂಘದ ಅಧ್ಯಕ್ಷರಾದ ಸುರೇಶ್ ಆಚಾರ್ಯ ಬೋರುಗುಡ್ಡೆ ಸಭಾ ವೇದಿಕೆಯಲ್ಲಿ ಉಪಸ್ತಿತರಿದ್ದರು.

ಪ್ರವೀಣ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು . ಚರಣ್ ಸೂಡ ಮತ್ತು ಕುಮಾರಿ ದೀಪಾಲಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!