Saturday, May 18, 2024
Homeಕ್ರೀಡೆಕ್ರಿಕೆಟ್‌ ಅಂಗಳಕ್ಕೂ ಎಂಟ್ರಿ ಕೊಟ್ಟ ಅದಾನಿ : ಟಿ20 ಲೀಗ್‌ನ ಐದನೇ ತಂಡ ಖರೀದಿಸಿದ ಅದಾನಿ...

ಕ್ರಿಕೆಟ್‌ ಅಂಗಳಕ್ಕೂ ಎಂಟ್ರಿ ಕೊಟ್ಟ ಅದಾನಿ : ಟಿ20 ಲೀಗ್‌ನ ಐದನೇ ತಂಡ ಖರೀದಿಸಿದ ಅದಾನಿ ಸ್ಪೋರ್ಟ್ಸ್‌ಲೈನ್‌  

spot_img
- Advertisement -
- Advertisement -

ಅಬುದಾಬಿ: ಇತ್ತೀಚೆಗಷ್ಟೇ ಟಿವಿ, ಮನೋರಂಜನೆ ಕ್ಷೇತ್ರಕ್ಕೆ ಕಾಲಿಟ್ಟ ಅದಾನಿ ಗ್ರೂಪ್‌ ಇದೀಗ ಕ್ರಿಕೆಟ್ ಅಂಗಳ ಪ್ರವೇಶ ಮಾಡಲು ಸಜ್ಜಾಗಿದೆ. ಹೊಸದಾಗಿ ಆರಂಭವಾಗಲಿರುವ ಟಿ-20 ಲೀಗ್‌ನಲ್ಲಿ ಅದಾನಿ ಗ್ರೂಪ್‌ ತಂಡವೊಂದನ್ನು ಖರೀದಿ ಮಾಡಿದೆ. ಆ ಮೂಲಕ ಕ್ರಿಕೆಟ್‌ಗೂ ಅದಾನಿ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಯುಎಇ ಟಿ-20 ಲೀಗ್‌ನ ತಂಡವೊಂದನ್ನು ಅದಾನಿ ಗ್ರೂಪ್‌ನ ಅಂಗಸಂಸ್ಥೆ ಅದಾನಿ ಸ್ಪೋರ್ಟ್ಸ್‌ಲೈನ್‌  ಖರೀದಿ ಮಾಡಿದೆ. ಆ ಮೂಲಕ ಲೀಗ್‌ನ ಐದನೇ ತಂಡದ ಮಾಲೀಕತ್ವವವನ್ನು ಅದಾನಿ ತನ್ನದಾಗಿಸಿಕೊಂಡಿದೆ.

ಭಾರತೀಯ ಮೂಲಕ ಬ್ಯಾಂಕೇತರ ಹಣಕಾಸು ಸಂಸ್ಥೆ ಕ್ಯಾಪ್ರಿ ಗ್ಲೋಬಲ್‌, ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ಫುಟ್‌ಬಾಲ್‌ ಕ್ಲಬ್‌ನ ಪೋಷಕ ಸಂಸ್ಥೆ ಲ್ಯಾನ್ಸರ್‌ ಕ್ಯಾಪಿಟಲ್‌, ಮುಂಬೈ ಇಂಡಿಯನ್ಸ್‌ ಕ್ರಿಕೆಟ್‌ ಫ್ರಾಂಚೈಸಿಯ ಪೋಷಕ ಸಂಸ್ಥೆ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆ ರಿಲಾಯನ್ಸ್‌ ಸ್ಟಾಟರ್ಜಿಕ್‌ ಬ್ಯುಸಿನೆಸ್‌ ವೆಂಚರ್‌ ಲಿಮಿಟೆಡ್‌ ಹಾಗೂ ದಿಲ್ಲಿ ಕ್ಯಾಪಿಟಲ್ಸ್‌ ತಂಡದ ಸಹ ಮಾಲೀಕ ಸಂಸ್ಥೆ ಜಿಎಂಆರ್‌ ಗ್ರೂಪ್‌ ಈಗಾಗಲೇ ಒಂದೊಂದು ತಂಡವನ್ನು ಖರೀದಿ ಮಾಡಿದೆ. ಐದನೇ ತಂಡವನ್ನು ಅದಾನಿ ಗ್ರೂಪ್‌ ಖರೀದಿ ಮಾಡಿದೆ. ಈ ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ.

ಇನ್ನು ತಂಡ ಖರೀದಿ ಮಾಡಿರುವ ಬಗ್ಗೆ ಮಾಹಿತಿ ನೀಡಿರುವ ಅದಾನಿ ಗ್ರೂಪ್‌, ‘ಯುಎಇ ಟಿ-20 ಲೀಗ್‌ನ ಭಾಗವಾಗುತ್ತಿರುವುದಕ್ಕೆ ಆನಂದವಾಗುತ್ತಿದೆ. ಯುಎಒ ಒಂದು ಹಲವು ಕ್ರಿಕೆಟ್‌ ಪ್ರೇಮಿ ದೇಶಗಳ ಒಕ್ಕೂಟ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಯುಎಇಯದ್ದು ತನ್ನದೇ ಆದ ಕೊಡುಗೆ ಇದೆ’ ಎಂದು ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರಣವ್‌ ಅದಾನಿ ಹೇಳಿದ್ದಾರೆ. ಕಳೆದ ವರ್ಷವೇ ಐಪಿಎಲ್‌ ಮೂಲಕ ಕ್ರಿಕೆಟ್‌ ಅಂಗಳಕ್ಕೆ ಕಾಲಿಡಲು ಅದಾನಿ ಸಜ್ಜಾಗಿತ್ತು. ಅದಕ್ಕಾಗಿ ಐಪಿಎಲ್‌ಗೆ ಪ್ರವೇಶ ಆಗಲಿರುವ ಲಖನೌ ಹಾಗೂ ಅಹಮದಾಬಾದ್‌ ಫ್ರಾಂಚೈಸಿ ಖರೀದಿಗೂ ಪ್ರಯತ್ನ ಮಾಡಿತ್ತು. ಇದಕ್ಕಾಗಿ 5100 ಕೋಟಿ ರೂ. ಬಿಡ್‌ ಕೂಡ ಸಲ್ಲಿಕೆ ಮಾಡಿತ್ತು. ಆದರೆ ಈ ಎರಡು ತಂಡಗಳನ್ನು ಕ್ರಮವಾಗಿ ಕಾರ್ಪೊರೇಟ್ ದಿಗ್ಗಜ ಕಂಪನಿಗಳಾದ ಆರ್‌ಪಿ ಸಂಜೀವ್‌ ಗೋಯೆಂಕಾ ಗ್ರೂಪ್‌ ಹಾಗೂ ಸಿವಿಸಿ ಕ್ಯಾಪಿಟಲ್‌ ಖರೀದಿ ಮಾಡಿತ್ತು. ಈ ವರ್ಷದ ಐಪಿಎಲ್‌ನಿಂದಲೇ ಈ ತಂಡಗಳು ಅಂಗಳಕ್ಕಿಳಿದಿವೆ.

- Advertisement -
spot_img

Latest News

error: Content is protected !!