Monday, May 13, 2024
Homeತಾಜಾ ಸುದ್ದಿ“ಎಷ್ಟೋ ಜನರು ನನ್ನ ದೇಹವನ್ನು ಬಳಸಿಕೊಂಡರು”: “ಸಾಕಷ್ಟು ಜನರು ನನ್ನ ಕೆಲಸದ ಉಪಯೋಗ ಪಡೆದರು”: ನಟಿ...

“ಎಷ್ಟೋ ಜನರು ನನ್ನ ದೇಹವನ್ನು ಬಳಸಿಕೊಂಡರು”: “ಸಾಕಷ್ಟು ಜನರು ನನ್ನ ಕೆಲಸದ ಉಪಯೋಗ ಪಡೆದರು”: ನಟಿ ಸಿಲ್ಕ್ ಸ್ಮಿತಾ ಆತ್ಮಹತ್ಯೆಗೆ ಮುನ್ನ ಬರೆದಿದ್ದ ಪತ್ರ ವೈರಲ್

spot_img
- Advertisement -
- Advertisement -

ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೇವಲ ಗ್ಲಾಮರ್ ಗೊಂಬೆಯಾಗಿರದೆ, ಅವರಿಗೆ ಅವರೇ ಒಂದು ಗೂಡು ಕಟ್ಟಿಕೊಂಡಿದ್ದರು. ಎಷ್ಟು ಬೇಗ ಯಶಸ್ಸು ಪಡೆದು ಹೆಸರು ಮಾಡಿದ್ದರೋ ಅಷ್ಟೇ ಬೇಗ ದುರಂತ ಅಂತ್ಯ ಕಂಡರು. 35ನೇ ವಯಸ್ಸಿನಲ್ಲಿ ಸಿಲ್ಕ್ ಆತ್ಮಹತ್ಯೆ ಮಾಡಿಕೊಂಡರು. ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಲ್ಕ್ ಸ್ಮಿತಾ ಅವರ ಆತ್ಮಹತ್ಯೆ ನೋಟ್ ವೈರಲ್ ಆಗುತ್ತಿದೆ.

80, 90ರ ದಶಕದಲ್ಲಿ ಸಿಲ್ಕ್ ಸ್ಮಿತಾ ಅವರು ಬಹು ಬೇಡಿಕೆಯ ನಟಿಯಾಗಿದ್ದರು. ಸಾಕಷ್ಟು ಸೋಲು ಕಂಡ ಸಂಬಂಧಗಳು, ಆರ್ಥಿಕ ಸಮಸ್ಯೆಗಳಿಂದ ಅವರು 1996ರಲ್ಲಿ 35ನೇ ವಯಸ್ಸಿನಲ್ಲಿ ನಿಧನರಾದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಿಲ್ಕ್ ಸ್ಮಿತಾ ಅವರು ತೆಲುಗಿನಲ್ಲಿ ಬರೆದ ನೋಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿಲ್ಕ್ ಸ್ಮಿತಾ ಅವರು ಬರೆದಿದ್ದ ಪತ್ರ
“ನಟಿಯಾಗಲು ಎಷ್ಟು ಕಷ್ಟಪಟ್ಟೆ ಅಂತ ನನಗೆ ಮಾತ್ರ ಗೊತ್ತಿದೆ, ನನ್ನನ್ನು ಯಾರೂ ಪ್ರೀತಿಸಲಿಲ್ಲ. ಬಾಬು ( ಸಿಲ್ಕ್ ಸ್ಮಿತಾ ಅವರ ಬಾಯ್‌ಫ್ರೆಂಡ್ ಡಾ ರಾಧಾಕೃಷ್ಣನ್ ) ಅವರು ನನಗೆ ಸ್ವಲ್ಪ ಪ್ರೀತಿ ನೀಡಿದರು. ಪ್ರತಿಯೊಬ್ಬರೂ ನನ್ನ ಕೆಲಸ ಹಾಳು ಮಾಡಿದರು. ಜೀವನದಲ್ಲಿ ನನಗೂ ಸಾಕಷ್ಟು ಆಸೆಗಳಿದ್ದವು.

ನಾನು ಎಲ್ಲಿ ಹೋದರೂ ನನಗೆ ಶಾಂತಿ ಇಲ್ಲ. ಪ್ರತಿಯೊಬ್ಬರೂ ಮಾಡುವ ಕೆಲಸಗಳು ನನ್ನನ್ನು ವಿಚಲಿತಗೊಳಿಸುತ್ತಿವೆ. ಬಹುಶಃ ಸಾವು ನನಗೆ ಶಾಂತಿ ನೀಡಬಹುದು. ನಾನು ಎಲ್ಲರಿಗೂ ಒಳ್ಳೆಯದನ್ನೇ ಮಾಡಿರುವೆ. ಆದರೂ ನನ್ನ ಜೀವನ ಹೀಗೆ ಆಗಿದ್ದೇಕೆ? ದೇವರೇ ಇದೆಂತ ನ್ಯಾಯ? ನಾನು ಗಳಿಸಿದ ಅರ್ಧ ಆಸ್ತಿಯನ್ನು ಬಾಬುಗೆ ( ಡಾ ರಾಧಾಕೃಷ್ಣನ್ ) ನೀಡಿರುವೆ. ಅದನ್ನು ನೀಡುವಾಗ ನಾನು ಇಷ್ಟಪಟ್ಟು ಮಾಡಿದ್ದೆ. ನನಗೆ ಆತ ಮೋಸ ಮಾಡೋದಿಲ್ಲ ಎಂದು ನಂಬಿದ್ದೆ, ಆದರೆ ಅವನು ಮೋಸ ಮಾಡಿದ.

ದೇವರು ಇದ್ದಿದ್ದರೆ ಆತನಿಗೆ ಶಿಕ್ಷೆ ಆಗುತ್ತಿತ್ತು. ನನಗೆ ಅವನು ನೀಡಿದ ಹಿಂಸೆಯನ್ನು ನಾನು ಸಹಿಸಲಾರೆ. ಪ್ರತಿದಿನ ಅದು ನನಗೆ ಬೇಸರ ತರುತ್ತದೆ. ಅವರು ಮಾಡೋದೆಲ್ಲ ಸರಿ ಅಂತ ಅವರಿಗೆ ಅನಿಸುತ್ತದೆ, ಬಾಬು ಕೂಡ ಅದೇ ಗ್ರೂಪ್‌ನಲ್ಲಿದ್ದಾನೆ. ನನ್ನಿಂದ ಪಡೆದ ಆಭರಣವನ್ನು ನಾನು ಮರಳಿ ಕೊಡಲೇ ಇಲ್ಲ. ನಾನು ಇನ್ನು ಬದುಕಿಲ್ಲ ಎಂದರೆ ಏನೂ ಸಮಸ್ಯೆಯಿಲ್ಲ. ಆದರೆ ದೇವರು ನನ್ನ ಹುಟ್ಟಿಸಿದ್ದು ಯಾಕೆ? ರಾಮು, ರಾಧಾಕೃಷ್ಣ ನನ್ನನ್ನು ತುಂಬ ಪ್ರಚೋದಿಸಿದರು ( ಏನು ಪ್ರಚೋದನೆ ಎಂದು ಹೇಳಿಲ್ಲ ) ಅವರಿಗೆ ನಾನು ತುಂಬ ಒಳ್ಳೆಯ ಕೆಲಸ ಮಾಡಿದೆ, ಆದರೆ ಅವರು ನಾನು ಸಾಯುವಂತೆ ಮಾಡಿದರು.

ಎಷ್ಟೋ ಜನರು ನನ್ನ ದೇಹವನ್ನು ಬಳಸಿಕೊಂಡರು. ಸಾಕಷ್ಟು ಜನರು ನನ್ನ ಕೆಲಸದ ಉಪಯೋಗ ಪಡೆದರು. ಬಾಬು ಹೊರತಾಗಿ ನಾನು ಯಾರಿಗೂ ಧನ್ಯವಾದ ಹೇಳಲಾರೆ. ಕಳೆದ 5 ವರ್ಷದಿಂದ ಒಬ್ಬರು ಬಾಬು ನನಗೆ ಜೀವನ ನೀಡಿದರು ಅಂತ ಹೇಳ್ತಾರೆ. ಆ ಜೀವನದಲ್ಲಿ ನಾನೆಷ್ಟು ಬದುಕಿದೆ ಅಂತ ನಿಮಗೆ ಗೊತ್ತಾ? ಇದೆಲ್ಲ ಕೇವಲ ಮಾತು ಅಂತ ಗೊತ್ತಾದಾಗ ನಾನು ಸಿಕ್ಕಾಪಟ್ಟೆ ಜರ್ಜಿತಳಾದೆ. ನನ್ನ ಹತ್ತಿರ ಇನ್ನು ಬದುಕಲು ಆಗೋದಿಲ್ಲ. ಈ ಪತ್ರ ಬರೆಯಲು ತುಂಬ ಕಷ್ಟವಾಯ್ತು. ನಾನು ಇಷ್ಟಪಟ್ಟ ಆಭರಣವನ್ನು ನನ್ನ ಹತ್ತಿರ ಕೊಂಡುಕೊಳ್ಳಲಾಗಲಿಲ್ಲ. ಅದನ್ನು ಈಗ ಯಾರು ಪಡೆದುಕೊಳ್ತಾರೆ ಅಂತನೂ ಗೊತ್ತಿಲ್ಲ”

ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಅವರು ಉತ್ತುಂಗದಲ್ಲಿದ್ದಾಗ ಸಿನಿಮಾದಲ್ಲಿ ಸಿಲ್ಕ್ ಅವರನ್ನು ಹಾಕಿಕೊಂಡು, ಎಷ್ಟೋ ನಿರ್ಮಾಪಕರು, ವಿತರಕರು ದುಡ್ಡು ಮಾಡಿಕೊಂಡರು. ತನ್ನ ಗ್ಲಾಮರ್‌ನಿಂದ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ಶಕ್ತಿ ಸಿಲ್ಕ್ ಸ್ಮಿತಾಗಿತ್ತು.

450ಕ್ಕೂ ಸಿನಿಮಾಗಳಲ್ಲಿ ನಟನೆ
1960ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಸಿಲ್ಕ್‌ ಸ್ಮಿತಾ ಅವರು, ತನ್ನ 19ನೇ ವಯಸ್ಸಿಗೆ ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದರು. ಮಲಯಾಳಂ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಅವರು ಅನೇಕ ಐಟಂ ಹಾಡುಗಳಲ್ಲಿ ಮಿಂಚಿದರು. ಬರೀ ಐಟಂ ಸಾಂಗ್ ಮಾತ್ರವಲ್ಲದೆ, ಗ್ಲಾಮರಸ್‌ ಪಾತ್ರಗಳಲ್ಲೂ ಹೆಚ್ಚು ಕಾಣಿಸಿಕೊಂಡಿದ್ದಾರೆ. 16 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ ಅವರು, ಐದು ಭಾಷೆಗಳಲ್ಲಿ 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ದಾಖಲೆ ಬರೆದಿದ್ದಾರೆ.

- Advertisement -
spot_img

Latest News

error: Content is protected !!