Saturday, May 18, 2024
Homeಮನರಂಜನೆದಕ್ಷಿಣ ಭಾರತದ ಖಡಕ್ ವಿಲನ್ ನಟ ರಘುವರನ್ ಹೆಂಡತಿ ಯಾರು ಗೊತ್ತೇ ? ಕನ್ನಡದಲ್ಲೂ ನಟನೆ...

ದಕ್ಷಿಣ ಭಾರತದ ಖಡಕ್ ವಿಲನ್ ನಟ ರಘುವರನ್ ಹೆಂಡತಿ ಯಾರು ಗೊತ್ತೇ ? ಕನ್ನಡದಲ್ಲೂ ನಟನೆ ಮಾಡಿದ್ದಾರೆ..

spot_img
- Advertisement -
- Advertisement -

ನೀಳಕಾಯ, ಸೂಕ್ಷ್ಮವಾದ ಕಣ್ಣುಗಳು, ಆ ಕಣ್ಣಿನಲ್ಲಿ ವ್ಯಕ್ತವಾಗುವ ಭಾವನೆಗಳಿಂದಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಅದ್ಬುತ ಖಳನಾಯಕರಾಗಿ ಮಿಂಚಿ ಇತ್ತೀಚೆಗೆ ಇಹಲೋಕ ತ್ಯಜಿಸಿದವರು.

ತಮ್ಮ ಅದ್ಭುತ ಭಾವ ಭಂಗಿಯಿಂದಲೇ ಇವರು ಎಲ್ಲ ಭಾಷೆಗಳ ಚಿತ್ರರಂಗದಲ್ಲೂ ಸ್ಥಾನ ಗಿಟ್ಟಿಸಿಕೊಂಡರು. ಮೂಲತ: ಕೇರಳದ ಪಾಲ್ಘಾಟ್ನವರಾದ ರಘುವರನ್ 1982 ರಲ್ಲಿ ‘ಏಳಾವುದು ಮನಿದನ್’ ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಾಯಕನಿಗಿಂತ ಹೆಚ್ಚಿಗೆ ಬೇಡಿಕೆ ಪಡೆದುಕೊಂಡ ಖಳನಟರಲ್ಲಿ ರಘುವರನ್ ಕೂಡಾ ಒಬ್ಬರು.

ಇವರ ಪ್ರತಿಭೆಗೆ ಅಮಿತಾಬ್ ಬಚ್ಚನ್ ಜೊತೆ ‘ಲಾಲ್ ಬಾದಶಾ’ ಚಿತ್ರದಲ್ಲಿ ನಟಿಸಿದ್ದೇ ಸಾಕ್ಷಿ. ಕನ್ನಡದ ಸಾಕಷ್ಟು ಚಿತ್ರಗಳಲ್ಲೂ ಇವರು ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಆಯುಧ, ದುರ್ಗಿ, ಸಾರಿ, ಸರ್ಕಲ್ ಇನ್ಸ್ಪೆಕ್ಟರ್, ಸಮರ, ಅಸುರ, ಪ್ರತ್ಯರ್ಥ, ಜೈಹಿಂದ್ ಹೀಗೆ ನಾನಾ ಚಿತ್ರಗಳಲ್ಲಿ ಕನ್ನಡದಲ್ಲಿ ನಟಿಸಿದ್ದಾರೆ. ದುರ್ಗಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಚಿತ್ರ ಇವರಿಗೆ ಉತ್ತಮ ಹೆಸರು ತಂದುಕೊಟ್ಟಿತ್ತು.

ಇವರು ರೋಹಿಣಿ ಎಂಬಾಕೆಯನ್ನು ಮದುವೆಯಾಗಿ ರಿಶಿ ಎಂಬ ಮಗನನ್ನು ಪಡೆದಿದ್ದರು. ಆದರೆ ಇವರ ವೈವಾಹಿಕ ಜೀವನ ಅಷ್ಟೇನೂ ಸುಖಕರವಾಗಿರಲಿಲ್ಲ. ರೋಹಿಣಿ ಅವರು ಕೂಡ ಒಬ್ಬ ನಟಿ. ಇವರಿಬ್ಬರು 1996 ರಲ್ಲಿ ಮದುವೆ ಆಗಿದ್ದು, 1998 ರಲ್ಲಿ ಒಂದು ಮಗು ಜನಿಸಿತು, ತದನಂತರ ನಟ ರಘುವರನ್ ಮತ್ತು ರೋಹಿಣಿ ಅವರ ನಡುವೆ ಆಗಾಗ ಜಗಳ ಆಗಿ ವೈಮನಸು ಉಂಟಾಗಿ, ಮದುವೆ ಆದ ಮೇಲೆ ಸ್ವಲ್ಪ ದಿನ ರೋಹಿಣಿ ಅವರ ಮಾತಿನ ಹಾಗೆ ಎಣ್ಣೆ ಕುಡಿಯುತ್ತಿರಲಿಲ್ಲ, ಮತ್ತೆ ಮದುವೆ ಆಗಿ ಮೂರ್‍ ವರ್ಷಗಳ ನಂತರ ಮತ್ತೆ ಎಣ್ಣೆ ಹೊಡೆಯುವದಕ್ಕೆ ಮುಂದಾದ ನಟ ರಘುವರನ್ ಅವರಿಗೆ, ಈತನ ಹೆಂಡತಿ ಕನ್ನಡದಲ್ಲೂ ನಟಿಸಿದ ನಟಿ, ಗಂಡನಿಗೆ 2004 ರಲ್ಲಿ ವಿಚ್ಛೇದನ ನೀಡಿದರು ಎಂದು ತಿಳಿದುಬಂದಿದೆ.

ಬಾಹುಬಲಿ ಚಿತ್ರದ ದೃಶ್ಯ

ರೋಹಿಣಿ ಯಾರು ?

1969 ರಲ್ಲಿ ಆಂಧ್ರಪ್ರದೇಶದ ಅಣಕಪಲ್ಲಿಯಲ್ಲಿ ಜನಿಸಿದ ರೋಹಿಣಿ, ತಮ್ಮ ಬಾಲ್ಯ ಮತ್ತು ಶಿಕ್ಷಣವನ್ನು ಪೂರೈಸಿದ್ದು ಚೆನ್ನೈನಲ್ಲಿ.. ತಮ್ಮ 6ನೇ ವರ್ಷಕ್ಕೆ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇವರು ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲ ನಟಿಯಾಗಿ ನಟನೆ ಮಾಡಿದ್ದಾರೆ. ತಮ್ಮ ಸಿನಿಜೀವನದಲ್ಲಿ 150ಕ್ಕೂ ಮಿಕ್ಕಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ವನಿತಾ ಫಿಲಂ ಅವಾರ್ಡ್ ಹೀಗೆ ಅನೇಕ ಪುರಸ್ಕಾರಗಳು ಇವರ ಮುಡಿಗೇರಿದೆ.. ಕನ್ನಡದ ‘ಚಾಮುಂಡೇಶ್ವರಿ ಪೂಜಾ ಮಹಿಮೆ’, ‘ಜಗದೇಕ ವೀರ’ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

- Advertisement -
spot_img

Latest News

error: Content is protected !!