Sunday, April 28, 2024
Homeತಾಜಾ ಸುದ್ದಿಲೌಕ್ ಡೌನ್ ನಲ್ಲಿ ಸದ್ದಿಲ್ಲದೇ ಮದುವೆಯಾದ ನಟಿ ಪ್ರಣಿತಾ ಸುಭಾಷ್

ಲೌಕ್ ಡೌನ್ ನಲ್ಲಿ ಸದ್ದಿಲ್ಲದೇ ಮದುವೆಯಾದ ನಟಿ ಪ್ರಣಿತಾ ಸುಭಾಷ್

spot_img
- Advertisement -
- Advertisement -

ಬೆಂಗಳೂರು: ಲಾಕ್ ಡೌನ್ ನಲ್ಲಿ ಮೊನ್ನೆಯಷ್ಟೇ ಸದ್ದಿಲ್ಲದೇ ನಟಿ ಕವಿತಾ ಗೌಡ ಹಾಗೂ ಚಂದನ್  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರಣಿತಾ ಸುಭಾಷ್​ ಸರದಿ. ಪ್ರಣಿತಾ ಅವರು ಸೈಲೆಂಟ್ ಆಗಿ  ಹಸೆಮಣೆ ಏರಿದ್ದಾರೆ.

ಲಾಕ್​ಡೌನ್​ನಲ್ಲಿ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೇ ಹರಿದಾಡುತ್ತಿತ್ತು. ಆದರೆ ಆ ಬಗ್ಗೆ ಪ್ರಣಿತಾ ಅವರು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಪ್ರಣಿತಾ ಮದುವೆಯ ಫೋಟೋಗಳ ಬಹಿರಂಗ ಆಗಿವೆ. ಆ ಮೂಲಕ ಅವರು ಸಪ್ತಪದಿ ತುಳಿದಿರುವುದಕ್ಕೆ ಸೂಕ್ತ ಸಾಕ್ಷಿ ಸಿಕ್ಕಂತಾಗಿದೆ.

2010ರಲ್ಲಿ ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರಣಿತಾ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಅವರಿಗೆ ದರ್ಶನ್​ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ತಮಿಳು ಮತ್ತು ತೆಲುಗಿನಲ್ಲಿಯೂ ಅವರು ಗುರುತಿಸಿಕೊಂಡರು. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕೆಲಸಗಳಲ್ಲೂ ಪ್ರಣಿತಾ ತೊಡಗಿಕೊಂಡಿದ್ದಾರೆ. ಆ ಮೂಲಕ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಈಗ ಅವರು ಗುಟ್ಟಾಗಿ ಮದುವೆ ಆಗಿರುವುದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ರೆಸಾರ್ಟ್​ವೊಂದರಲ್ಲಿ ಪ್ರಣಿತಾ ಮದುವೆ ನಡೆದಿದೆ. ನಿತಿನ್​ ರಾಜ್​ ಎಂಬ ಉದ್ಯಮಿ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂರು ದಿನದ ಹಿಂದೆ ಮದುವೆ ವಿಚಾರ ಹರಿದಾಡುತ್ತಿದ್ದಂತೆಯೇ ಅವರನ್ನು ಸಂಪರ್ಕಿಸಲು ಮಾಧ್ಯಮದವರು ಪ್ರಯತ್ನಿಸಿದ್ದರು. ಆದರೆ ‘ನಾನಿನ್ನೂ ಮದುವೆ ಆಗಿಲ್ಲ’ ಎನ್ನುವ ಮೂಲಕ ಸುದ್ದಿಯನ್ನು ಅವರು ತಳ್ಳಿ ಹಾಕಿದ್ದರು. ಆದರೆ ಈಗ ಫೋಟೋಗಳು ಲಭ್ಯವಾಗಿದ್ದು, ಮದುವೆ ನಡೆದಿರುವುದು ಖಚಿತ ಆಗಿದೆ.

ಪೊರ್ಕಿ, ಭೀಮ ತೀರದಲ್ಲಿ, ಬ್ರಹ್ಮ, ಮಾಸ್​ ಲೀಡರ್​ ಮುಂತಾದ ಸಿನಿಮಾಗಳಲ್ಲಿ ಪ್ರಣಿತಾ ನಟಿಸಿದ್ದಾರೆ. ಬಾಲಿವುಡ್​ಗೂ ಕಾಲಿಟ್ಟಿರುವ ಅವರು ‘ಭುಜ್’​, ‘ಹಂಗಾಮಾ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ.

- Advertisement -
spot_img

Latest News

error: Content is protected !!