- Advertisement -
- Advertisement -
ಬಂಟ್ವಾಳ: ದಕ್ಷಿಣಕನ್ನಡದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕಾರಿಂಜೇಶ್ವರ ದೇಗುಲದಲ್ಲಿ ಮಂಗಗಳು ಹಸಿವಿನಿಂದ ಬಳಲುತ್ತಿವೆ. ಲಾಕ್ ಡೌನ್ ನಿಂದಾಗಿ ಮಂಗಗಳಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯೇ ಸ್ಪಷ್ಟನೆ ನೀಡಿದೆ.
ಲಾಕ್ ಡೌನ್ ಪರಿಣಾಮ ಹಸಿವಿನಿಂದ ಬಳಸುತ್ತಿರುವ ಕಾರಿಂಜದ ಮಂಗಗಳು ಎಂಬ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಪ್ರಸ್ತುತ ಅಂತಹ ಪರಿಸ್ಥಿತಿ ಇಲ್ಲ. ಈ ಬಗ್ಗೆ ಅನೇಕ ಭಕ್ತಾದಿಗಳಿಂದ ಸಹಾಯ ಕೇಳಿ ದೂರವಾಣಿ ಕರೆ ಬರುತ್ತಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಎಲ್ಲಾ ಭಕ್ತರಿಗೂ ಧನ್ಯವಾದಗಳು. ಅಗತ್ಯವಿದ್ದರೆ ಖಂಡಿತಾ ತಮ್ಮ ಸಹಾಯ ಯಾಚಿಸುತ್ತೇವೆ. ದೇವಾಲಯದ ಕಾರ್ಯಾಲಯವನ್ನು ಸಂಪರ್ಕಿಸದೆ ಯಾರೂ ಇಂತಹ ಸುದ್ದಿಗಳನ್ನು ಹರಡಬಾರದಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ದೇಗುಲದ ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡಿದ್ದಾರೆ.
- Advertisement -