- Advertisement -
- Advertisement -
ತಮಿಳು ಚಿತ್ರರಂಗದ ಖ್ಯಾತ ನಟಿ ಮನೋರಮಾ ಅವರ ಪುತ್ರ ಭೂಪತಿ ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಯ ಪ್ರಕಾರ, ನಟಿ ಮನೋರಮಾ ಅವರ ಪುತ್ರ ಭೂಪತಿ ಮದ್ಯಪಾನ ವ್ಯಸನಿ. ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಸಿಗದ ಕಾರಣ ಅಸಮಾಧಾನಗೊಂಡ ಭೂಪತಿ ಮಲಗುವ ಮಾತ್ರೆಗಳನ್ನು ಸೇವಿಸಿದ್ದಾರೆ.
ಮದ್ಯ ಸಿಗದ ಕಾರಣ ಭೂಪತಿ ಖಿನ್ನತೆಗೆ ಒಳಗಾಗಿದ್ದರಂತೆ. ಹಾಗಾಗಿ ನಿದ್ರೆ ಮಾತ್ರೆ ಸೇವನೆ ಮಾಡ್ತಿದ್ದರಂತೆ. ಆದ್ರೆ ಮಿತಿಗಿಂತ ಹೆಚ್ಚು ಮಾತ್ರೆ ಸೇವಿಸಿದ ಕಾರಣ ಆಸ್ಪತ್ರೆ ಸೇರುವಂತಾಗಿದೆ. ಭೂಪತಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಮನೋರಮಾ 2015ರಲ್ಲಿ ಇಹಲೋಕ ತ್ಯಜಿಸಿದ್ದಾರೆ. 1964ರಲ್ಲಿ ವಿವಾಹವಾಗಿದ್ದ ಅವರು ಎರಡು ವರ್ಷಗಳ ನಂತ್ರ ವಿಚ್ಛೇದನ ಪಡೆದಿದ್ದರು. ಮಗ ಮನೋರಮಾ ಜೊತೆ ವಾಸವಾಗಿದ್ದ.
- Advertisement -