- Advertisement -
![]()
- Advertisement -
ಕೇರಳದ ಎರ್ನಾಕುಳಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನದ ದೇವರ ದರ್ಶನಕ್ಕೆ ಬಂದ ಖ್ಯಾತ ನಟಿ ಅಮಲಾ ಪೌಲ್ ಅವರನ್ನು ದೇವಾಲಯದ ಅಧಿಕಾರಿಗಳು ತಡೆದಿರುವ ಘಟನೆ ನಡೆದಿದೆ. ಅಮಲಾ ಪೌಲ್ ಕ್ರಿಶ್ಚಿಯನ್ ಆಗಿದ್ದರಿಂದ ದೇವಸ್ಥಾನದ ಅಧಿಕಾರಿಗಳು ಅವರಿಗೆ ಪ್ರವೇಶ ನೀಡಿಲ್ಲ. ರಸ್ತೆಯಲ್ಲೇ ದೇವರ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ಅಮಲಾ ಅವರು ಹಿಂದಿರುಗಿದ ಘಟನೆ ನಡೆದಿದೆ.
ಗುರುವಾಯೂರು ದೇವಸ್ಥಾನದಂತೆ ತಿರುವೈರಾಣಿಕ್ಕುಳಂ ಮಹಾದೇವ ದೇವಸ್ಥಾನದಲ್ಲೂ ಹಿಂದುಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಅಧಿಕಾರಿಗಳು ದೇವಸ್ಥಾನದ ಸಂಪ್ರದಾಯಗಳನ್ನು ಮಾತ್ರ ಅನುಸರಿಸಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇನ್ನು ದೇವಿಯ ದರ್ಶನ ಸಿಗದಿದ್ದರೂ ಸಂತೃಪ್ತಿಯಿಂದ ಮರಳುತ್ತಿದ್ದೇನೆ ಎಂದು ಅಮಲಾ ಪೌಲ್ ದೇವಸ್ಥಾನದ ಸಂದರ್ಶಕರ ನೋಂದಣಿಯಲ್ಲಿ ತಮ್ಮ ನಿರಾಸೆಯನ್ನು ತಿಳಿಸಿದ್ದಾರೆ.
- Advertisement -


