- Advertisement -
![]()
- Advertisement -
ಬೆಂಗಳೂರು : ಕೊರೊನಾ ವೈರಸ್ ದಿನೇ ದಿನೇ ತನ್ನ ದಾಹಕ್ಕೆ ಬಲಿ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಇದೀಗ ನಟ ಶ್ರೀನಗರ ಕಿಟ್ಟಿ ಅವರ ಸಹೋದರ ಕೋವಿಡ್ -19 ಗೆ ಬಲಿಯಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಶ್ರೀನಗರ ಕಿಟ್ಟಿ ಅವರ ಸಹೋದರ ಶಂಕರಣ್ಣ ಜೂನ್ 29 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಕೋವಿಡ್ ನಿಯಮಗಳ ಅನುಸಾರವಾಗಿ ಅವರ ಗಂಟಲು ದ್ರವದ ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರೋದು ಗೊತ್ತಾಗಿದೆ.
ಸರ್ಕಾರಿ ನಿಯಮಗಳಿಗೆ ಅನುಸಾರವಾಗಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು. ಇನ್ನು ಅವರ ಕುಟುಂಬದವರನ್ನೂ ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಎಲ್ಲರ ವರದಿ ಕೂಡ ನೆಗೆಟಿವ್ ಬಂದಿದೆ ಎನ್ನಲಾಗುತ್ತಿದೆ.
- Advertisement -


