Saturday, June 29, 2024
Homeತಾಜಾ ಸುದ್ದಿನಟ ʼಪ್ರಜ್ವಲ್‌ ದೇವರಾಜ್‌ ಇನ್ನಿಲ್ಲʼ ಎನ್ನುವ ಪೋಸ್ಟರ್‌ ವೈರಲ್

ನಟ ʼಪ್ರಜ್ವಲ್‌ ದೇವರಾಜ್‌ ಇನ್ನಿಲ್ಲʼ ಎನ್ನುವ ಪೋಸ್ಟರ್‌ ವೈರಲ್

spot_img
- Advertisement -
- Advertisement -

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಕುರಿತಾದ ‘ಪ್ರಜ್ವಲ್‌ ದೇವರಾಜ್‌ ಇನ್ನಿಲ್ಲʼ ಎಂದು ಬರೆದಿರುವ ಫೋಟೋವೊಂದು ದೊಡ್ಡಮಟ್ಟದಲ್ಲಿ ಹರಿದಾಡಿ, ಎಲ್ಲೆಡೆ ಶೇರ್‌ ಆಗಿದೆ.

ಇದನ್ನು ನೋಡಿದ ಕೆಲವರು ದಿಢೀರನೇ ಆಘಾತಕ್ಕೆ ಒಳಗಾಗಿದ್ದು, ಈ ಸುದ್ದಿ ಕುರಿತು ಒಮ್ಮೆಗೆ ಶಾಕ್‌ ಆಗಿದ್ದಾರೆ. ಆದರೆ ಈ ಫೋಟೋ ವೈರಲ್‌ ಆದ ಕೆಲವೇ ನಿಮಿಷದಲ್ಲಿ ಅಸಲಿ ಸಂಗತಿ ಬಯಲಾಗಿದೆ.

ವೈರಲ್‌ ಆಗುತ್ತಿರುವ ಫೋಟೋ ʼವೀರಂʼ ಸಿನಿಮಾದ್ದು ಎನ್ನಲಾಗುತ್ತಿದ್ದು, ಕೆಲವರು ಈ ಫೋಟೋವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಅವರಿಗೆ ಏನು ಆಗಿಲ್ಲ, ಇದು ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು ಸುದ್ದಿಯೆಂದು ನಟನ ಆಪ್ತ ಮೂಲಗಳಿಂದ ತಿಳಿದು ಬಂದಿದೆ. 

ಇನ್ನು ಈ ರೀತಿ ಕೃತ್ಯವೆಸಗಿದವರ ವಿರುದ್ಧ ನಟನ ಕುಟುಂಬ ದೂರು ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!