ಮುಂಬೈ: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಶೀಘ್ರದಲ್ಲೇ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಹೀಗಂತ ವದಂತಿಯೊಂದು ಹರಿದಾಡುತ್ತಿತ್ತು. ಉದ್ಯಮಿ, ಇಂಟಿರಿಯರ್ ಡಿಸೈನರ್, ಟೆಕ್ ಮತ್ತು ವಿನ್ಯಾಸ ಉತ್ಸಾಹಿ ಗೌತಮ್ ಕಿಟ್ಚ್ಲು ಎಂಬುವವರನ್ನು ಕಾಜಲ್ ವರಿಸಲಿದ್ದಾರಂತೆ ಎಂದು ಹೇಳಲಾಗಿತ್ತು. ಇಲ್ಲಿಯವರೆಗೆ ವದಂತಿ ಅಂದುಕೊಂಡಿದ್ದವರಿಗೆ ಇದೀಗ ಸ್ವತಃ ಕಾಜಲ್ ಸರ್ಪ್ರೈಸ್ ನೀಡಿದ್ದಾರೆ. ನಾವು ಮದುವೆಯಾಗುತ್ತಿರುವುದು ನಿಜ ಎಂದು ಖಚಿತಪಡಿಸಿದ್ದಾರೆ.

ಖ್ಯಾತ ಉದ್ಯಮಿ ಗೌತಮ್ ಜೊತೆ ಮುಂಬೈನಲ್ಲಿ ಕಾಜಲ್ ಮದುವೆ ಆಗ್ತಿದ್ದಾರಂತೆ. ಇನ್ನು, ಲಾಕ್ಡೌನ್ ಬಳಿಕ ಮುಂಬೈನಲ್ಲಿ ನಡೆಯುತ್ತಿರೋ ಮೊದಲ ಸೆಲೆಬ್ರಿಟಿ ಮದುವೆ ಇದಾಗಿದೆ. ಇತ್ತ ಕಾಜಲ್ ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾದಲ್ಲಿ ಆಯಕ್ಟ್ ಮಾಡ್ತಾರೆ ಅನ್ನೋ ಸುದ್ದಿ ಓಡಾಡ್ತಿತ್ತು. ಅತ್ತ ನೋಡಿದ್ರೆ, ಕಾಜಲ್ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ.

ಇನ್ನು, ಮದುವೆ ಆಗ್ತಿದ್ದಾರೆ ಅನ್ನೋದಕ್ಕೆ ಪೂರಕವೆಂಬಂತೆ, ನಿನ್ನೆಯಷ್ಟೇ ಕಾಜಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇಂದು ಹಾರ್ಟ್ವೊಂದನ್ನ ಪೋಸ್ಟ್ ಮಾಡಿದ್ದರು. ಇದೀಗ ಹೌದು ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.