Saturday, April 20, 2024
Homeತಾಜಾ ಸುದ್ದಿದರ್ಶನ್ ಫ್ಯಾನ್ಸ್ ಗಳಿಂದ​ ಮುತ್ತಿಗೆ: 'ನಾವು ಸತ್ತ ಮೇಲೆ ನಮ್ಮ ತಿಥಿ ಮಾಡಿ ಸಂತೋಷ ಪಡಿ'...

ದರ್ಶನ್ ಫ್ಯಾನ್ಸ್ ಗಳಿಂದ​ ಮುತ್ತಿಗೆ: ‘ನಾವು ಸತ್ತ ಮೇಲೆ ನಮ್ಮ ತಿಥಿ ಮಾಡಿ ಸಂತೋಷ ಪಡಿ’ ಎಂದ ಹಿರಿಯ ನಟ ಜಗ್ಗೇಶ್

spot_img
- Advertisement -
- Advertisement -

ಬೆಂಗಳೂರು: ನಿನ್ನೆ ನಟ ದರ್ಶನ್ ರ ಕೆಲ ಅಭಿಮಾನಿಗಳ ಮುತ್ತಿಗೆ, 40 ವರ್ಷಗಳ ಚಿತ್ರರಂಗದ ಬದುಕಿಗೆ ಅಪಮಾನ ಮಾಡಿದ ಘಟನೆಗಳಿಂದ ತೀವ್ರವಾಗಿ ನೊಂದಿರುವ ನವರಸನಾಯಕ ಜಗ್ಗೇಶ್ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ಮುಂದೆ ಎಲ್ಲಾ ಚಟುವಟಿಕೆಗಳಿಂದಲೂ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ಇಂದು (ಫೆ.23) ಮುಂಜಾನೆ ಟ್ವೀಟರ್ ಲೈವ್ ವಿಡಿಯೋದಲ್ಲಿ ಸುಮಾರು 14 ನಿಮಿಷ ಮಾತಾಡಿರುವ ಜಗ್ಗೇಶ್, ಆಕ್ರೋಶದ ಜತೆ ನೋವು ತೋಡಿಕೊಂಡಿದ್ದಾರೆ. ‘ಇವತ್ತು ಯಾರಿಂದಾದರೂ ನನ್ನ ಮೈ ಮುಟ್ಟೋಕೆ ಆಗುತ್ತೇನ್ರಿ ? ಏನ್ ಮಾತಾಡ್ತೀರಿ ನೀವು’ ? ಎಂದು ಗುಡುಗಿರುವ ಜಗ್ಗಣ್ಣ, ಇಂದು ಅನ್ಯಭಾಷಿಗರು ಬಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನ್ನಡದ ಮಕ್ಕಳನ್ನ ಬೆಳೆಯದಂತೆ ತುಳಿಯುತ್ತಿದ್ದಾರೆ. ಈ ಕನ್ನಡ ಚಿತ್ರರಂಗ ಹಾಳಾಗಿ ಹೋಗಲಾ ? ಯಾರು ಹೇಳೋರು ಇಲ್ಲ ಕೇಳೋರು ಇಲ್ವಾ? ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಸತ್ತ ಮಾರನೇ ದಿನವೇ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದವರು ನಾವೇ ಮೂರು ನಾಲ್ಕು ಜನ. ನಾನು, ಶಿವರಾಜ್‌ಕುಮಾರ್‌, ರವಿಚಂದ್ರನ್‌, ರಮೇಶ್‌. ನಾವೆಲ್ಲಾ ಸತ್ತ ಮೇಲೆ ನಮ್ಮ ತಿಥಿ ಮಾಡಿ. ಆನಂದಪಡಿ, ಸಂತೋಷ ಪಡಿ ನಿವೇಲ್ಲ. ನಿಮ್ಮ ಮೇಲೆ ನಂಗೆ ಅಸಹ್ಯ ಹುಟ್ಟುತ್ತಿದೆ ಎಂದು ನೋವು ಹೊರಹಾಕಿದ್ದಾರೆ.

ಒಂದು ವಿಷಯವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಸಣ್ಣ ವಿಷಯವನ್ನು ಇಟ್ಟುಕೊಂಡು ನೋವು, ಅಪಮಾನವನ್ನು ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ, ರಾಬರಿ ಮಾಡಿದ್ದೀನಾ? ಹೆದರಿ ಕೂತಿದೀನಾ? ನಿನ್ನೆ ಬಂದಿರುವವರ ಜೊತೆಯಲ್ಲಿ ಅವರೊಂದಿಗೆ ಕೂತು ಮಾತನಾಡಿದ್ದೇನೆ. ಖಾಸಗಿ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವ ಹಾಗೆ ಆಗಿದೆ. ಹಾಗಂತ ನಾನು ಹೆದರಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ.

ನಾನು ಸಿನಿಮಾ ರಂಗಕ್ಕೆ ಬಂದು 40 ವರ್ಷ ಆಗಿದೆ. ರಾಜ್ ಕುಮಾರ್, ವಿಷ್ಣುವರ್ಧನ್, ಪ್ರಭಾಕರ್ ಅವರ ಜೊತೆಗೆ ಹೆಜ್ಜೆ ಹಾಕುತ್ತಾ ಬಂದಿರುವನು ನಾನು. ನಾನು ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆ. ನಾನು ನನ್ನ ಬದುಕಲ್ಲೇ ಯಾರ ಬೂಟು ನೆಕ್ಕಿಲ್ಲ ಹಾಗೇ ಮಾಡಿದ್ದರೆ ನಾನು ಎಷ್ಟೋ ಬಾರಿ ಎಂಎಲ್‍ಎ, ಮಂತ್ರಿ ಆಗುತ್ತಿದೆ. ನೂರಾರು ಪೋಸ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದೆ. ನೀವು ಹೇಳಿದ್ದನೆಲ್ಲ ನಂಬಲು ಜನ ಒಂದು ಸೈಡ್ ಇಲ್ಲ. ಸತ್ಯ ಹೇಳುವುದಕ್ಕೆ ಸೋಷಿಯಲ್ ಮೀಡಿಯಾ ಇದೆ. ಇದೆನಾ ನೀವು ಹಿರಿಯ ನಟರಿಗೆ ಕೊಡು ಗೌರವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ.

ಜಗ್ಗೇಶ್ ಅವರ ಆಕ್ರೋಶದ ನುಡಿಗಳು ಇಲ್ಲಿವೆ ನೋಡಿ.

- Advertisement -
spot_img

Latest News

error: Content is protected !!