Friday, June 5, 2026
Homeತಾಜಾ ಸುದ್ದಿಕಡಬದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಹೊಳೆಯಲ್ಲಿ ಪತ್ತೆ

ಕಡಬದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಹೊಳೆಯಲ್ಲಿ ಪತ್ತೆ

- Advertisement -
- Advertisement -

ಕಡಬ : ಇಲ್ಲಿನ  ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದೆ. ಮಹಿಳೆಯ ವಯಸ್ಸು ಸುಮಾರು 65 ರಿಂದ 70 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲ್ ಹಾಗೂ ಕೈಯಲ್ಲಿ ಕನ್ನಡಕ ಇದ್ದು, ಮೃತರು ಇಂದು ಬೆಳಿಗ್ಗೆ ಯಾವುದೋ ಕಾರಣಕ್ಕಾಗಿ ಹೊಳೆಗೆ ಇಳಿದ ವೇಳೆ ಕಾಲು ಜಾರಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಸ್ಥಳಕ್ಕೆ ತೆರಳಿದ ಕಡಬ ಎಸ್‌ಐ ರುಕ್ಮನಾಯ್ಕ್ ಸ್ವತಃ ನೀರಿಗೆ ಇಳಿದು ಊರವರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ದೇರಳಕಟ್ಟೆ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

- Advertisement -

Latest News

error: Content is protected !!