Wednesday, June 26, 2024
Homeತಾಜಾ ಸುದ್ದಿನಟಿ ಪವಿತ್ರ ಜಯರಾಂ ಅಗಲಿಕೆ ನೋವಿನಿಂದ ತಾನೂ ಆತ್ಮಹತ್ಯೆಗೆ ಶರಣಾದ ಗೆಳೆಯ ಚಂದ್ರಕಾಂತ್

ನಟಿ ಪವಿತ್ರ ಜಯರಾಂ ಅಗಲಿಕೆ ನೋವಿನಿಂದ ತಾನೂ ಆತ್ಮಹತ್ಯೆಗೆ ಶರಣಾದ ಗೆಳೆಯ ಚಂದ್ರಕಾಂತ್

spot_img
- Advertisement -
- Advertisement -

ಹೈದರಾಬಾದ್: ಮೊನ್ನೆಯಷ್ಟೇ ನಟ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಇದೀಗ ಅವರ ಗೆಳೆಯ ನಟ ಚಂದ್ರಕಾಂತ್ ನೇಣಿಗೆ ಶರಣಾಗಿದ್ದಾರೆ.

ಮೂಲತಃ ಮಂಡ್ಯದವರಾದ ಪವಿತ್ರಾ  ಮೇ12 ರಂದು ಆಂಧ್ರದ ಕಾರು ಮಹೆಬೂಬ್‌ನಗರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದರು. ಈ ಅಪಘಾತದಲ್ಲಿ ಕಿರುತೆರೆ ನಟ ಚಂದ್ರಕಾಂತ್ ಕೂಡ ಗಾಯಗೊಂಡಿದ್ದರು. ಪವಿತ್ರಾ ಅವರ ಅಂತ್ಯಕ್ರಿಯೆಗೆ ಮಂಡ್ಯಗೆ ಗಾಯ ಆಗಿದ್ದರೂ ಚಂದು ಬಂದಿದ್ದರು. ಈ ವೇಳೆ ತನ್ನ ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಮಾತನಾಡಿದ್ದರು.

ಶುಕ್ರವಾರ ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ತನ್ನ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಚಂದ್ರಕಾಂತ್ ಹಾಗೂ ಪವಿತ್ರ ರಿಲೇಷನ್ ಶಿಫ್ ನಲ್ಲಿದ್ದರು ಎಂದು ಹೇಳಲಾಗಿದ್ದು, ಇದೇ ನೋವಿನಲ್ಲಿ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾಗಿರುವ ಸಾದ್ಯತೆ ಇದೆ ಎಂದು ಹೇಳಲಾಗಿದೆ. ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಇವರು, 2015 ರಲ್ಲಿ ಶಿಲ್ಪಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ.

- Advertisement -
spot_img

Latest News

error: Content is protected !!