Tuesday, July 1, 2025
Homeತಾಜಾ ಸುದ್ದಿಅಗ್ನಿ ಪಥ್ ಯೋಜನೆಗೆ ಉತ್ತರ ಭಾರತದಲ್ಲಿ ವಿರೋಧ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಕ್ರಮ: ಮುಖ್ಯಮಂತ್ರಿ...

ಅಗ್ನಿ ಪಥ್ ಯೋಜನೆಗೆ ಉತ್ತರ ಭಾರತದಲ್ಲಿ ವಿರೋಧ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

spot_img
- Advertisement -
- Advertisement -

ನವದೆಹಲಿ: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆ ಕುರಿತು ಪ್ರತಿಭಟನೆಗಳಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಸಿಎಂ, ನಿನ್ನೆಯಷ್ಟೇ ಡಿಜಿಪಿ, ಎಡಿಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರು, ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಗೊಂದಲ, ಗಲಾಟೆಯಾಗಬಾರದು ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಅಗ್ನಿಪಥ ಯೋಜನೆ ಸದ್ದುದ್ದೇಶದಿಂದ ಆಗಿದೆ. 17 ರಿಂದ 21 ಕಲಿಯುವ ವಯಸ್ಸು. ಮಿಲಿಟರಿ ತರಬೇತಿ ಪಡೆದ ವ್ಯಕ್ತಿತ್ವ ಹೊರಬಂದಾಗ ಅವರಿಗೆ ವಿವಿದೆಡೆ ವಿಪುಲವಾದ ಅವಕಾಶ ದೊರೆಯುತ್ತದೆ. ಇಂತಹ ಯಾವುದೇ ರೀತಿಯ ಅವಕಾಶಗಳು ಇರಲಿಲ್ಲ ಎಂದು ಸಿಎಂ ಅಗ್ನಿ ಪಥ್ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೇ ಕೇವಲ ಒಂದು ದೃಷ್ಟಿಯಿಂದ ನೋಡದೇ ಒಂದು ದೊಡ್ಡ ತರಬೇತಿ ಪಡೆದ ಯುವ ಸಮೂಹ ಹೊರಬಂದರೆ ಸಮಾಜ ಉಪಯೋಗವಾಗಲಿದೆ. ಕೇಂದ್ರ ಸರ್ಕಾದಿಂದಲೂ ಇನ್ನಷ್ಟು ಸ್ಪಷ್ಟೀಕರಣ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!