Sunday, June 7, 2026
Homeಕರಾವಳಿಉಜಿರೆ ಬೆನಕ ಆಸ್ಪತ್ರೆಯಲ್ಲಿ ಮತ್ತೊಂದು ಸಾಧನೆ..!; 4.5 ಕೆ.ಜಿ ತೂಕದ ಮಗು ಸಹಜ ಹೆರಿಗೆ ಮೂಲಕ...

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮತ್ತೊಂದು ಸಾಧನೆ..!; 4.5 ಕೆ.ಜಿ ತೂಕದ ಮಗು ಸಹಜ ಹೆರಿಗೆ ಮೂಲಕ ಜನನ

- Advertisement -
- Advertisement -

ಬೆಳ್ತಂಗಡಿ :  ಸಹಜ ಹೆರಿಗೆ   ಮೂಲಕ ತಾಯಿಯ ಗರ್ಭದಿಂದ ಮಗುವನ್ನು ಹೊರತೆಗೆಯುವ ಸಂದರ್ಭದಲ್ಲೂ ಬೆನಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ಅಂಕಿತಾ.ಜಿ.ಭಟ್ ತಮ್ಮ ಚಾಣಾಕ್ಷತನದಿಂದ ಹಾಗೂ ಧೈರ್ಯದಿಂದ ತಾಯಿಗೆ ಸಹಜ ಹೆರಿಗೆ ಮಾಡಿಸಿ ತಮ್ಮ ಸಂಸ್ಥೆಯ ಹೆಸರನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸತತ 16 ಗಂಟೆಗಳ ವೈದ್ಯರ ಪ್ರಯತ್ನದಿಂದ ತಾಯಿಗೆ ಮಾ.24 ರಂದು ಸಹಜ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಜನನವಾದ ಮಗು 4.5 ಕೆ.ಜಿ ತೂಕವಿತ್ತು. ಮಗುವಿನ ತಾಯಿ ಬೆನಕ ಆಸ್ಪತ್ರೆಯ ಸಿಬ್ಬಂದಿ ಕೂಡ ಹೌದು. ತಾಯಿಯ ಸಹಜ ಹೆರಿಗೆಯಿಂದ ಮನೆಮಂದಿ ಹಾಗೂ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಫೆ.26 ರಂದು ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ 1.6 ಕೆ.ಜಿ ಗೆಡ್ಡೆಯನ್ನು ಸತತ 3 ಗಂಟೆಗಳ ಪ್ರಯತ್ನದಿಂದ ಡಾ.ಅಂಕಿತಾ.ಜಿ.ಭಟ್ ಅವರು ಕೀ ರಂದ್ರ ಚಿಕಿತ್ಸೆ ಮೂಲಕ ಹೊರತೆಗದಿದ್ದರು.

- Advertisement -

Latest News

error: Content is protected !!