Thursday, June 4, 2026
Homeಕರಾವಳಿಮಂಗಳೂರುಸುಳ್ಯ: 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಸುಳ್ಯ: 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಸುಳ್ಯ: 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಕೇರಳ ತ್ರಿಶೂರ್ ಜಿಲ್ಲೆಯ ನಾಟಿ ಮನೆ ನಿವಾಸಿ ಬಾಲನ್(73)   ಬಂಧಿತ ಆರೋಪಿ,

ಈತ 1990 ರಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುವುವ ಪ್ರಕರಣಕ್ಕೆ ಸಂಬಂದಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಬಾಲನ್ ನ್ಯಾಯಾಲಯಕ್ಕೆ ಹಾಜರಾಗದೆ 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಈತನನ್ನು ಕೇರಳ ರಾಜ್ಯದ ತ್ರಿಶೂರ್ ನಿಂದ ಬಂಧಿಸಿ ದಿನಾಂಕ 13.10.2025 ರಂದು ಮಾನ್ಯ ನ್ಯಾಯಧೀಶರು  JMFC ನ್ಯಾಯಾಲಯ, ಸುಳ್ಯರವರ ಮುಂದೆ ಹಾಜರು ಪಡಿಸಿದ್ದು ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

- Advertisement -

Latest News

error: Content is protected !!