Saturday, June 27, 2026
Homeಕರಾವಳಿಸುಳ್ಯದಲ್ಲಿ ರಸ್ತೆ ದಾಟುವಾಗ ಬೊಲೆರೋ ವಾಹನ ಡಿಕ್ಕಿಯಾಗಿ ವ್ಯಕ್ತಿಗೆ ಗಂಭೀರ ಗಾಯ

ಸುಳ್ಯದಲ್ಲಿ ರಸ್ತೆ ದಾಟುವಾಗ ಬೊಲೆರೋ ವಾಹನ ಡಿಕ್ಕಿಯಾಗಿ ವ್ಯಕ್ತಿಗೆ ಗಂಭೀರ ಗಾಯ

- Advertisement -
- Advertisement -

ಸುಳ್ಯ:  ರಸ್ತೆ ದಾಟುವ ಸಂದರ್ಭದಲ್ಲಿ ಬೊಲೆರೋ ವಾಹನ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಸುಳ್ಯ ಪೇಟೆಯಲ್ಲಿ ನಡೆದಿದೆ. ಪೆರಾಜೆ ಬಂಗಾರಕೋಡಿ ನಿವಾಸಿ ಗೋಪಾಲ ಕಜೆಮೂಲೆ ಗಾಯಗೊಂಡವರು.


ಸುಳ್ಯ ಪೇಟೆಯ ಖಾಸಗಿ ಬಸ್ ನಿಲ್ದಾಣ ಬಳಿ ಘಟನೆ ನಡೆದಿದೆ. ಬೊಲೆರೋ ವಾಹನ ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಾರೆ ಸಮೀಪದ ಮಾಡಾವು ಎಂಬಲ್ಲಿಯ ವ್ಯಕ್ತಿಯ ಬೊಲೆರೋ ಎಂದು ತಿಳಿದುಬಂದಿದೆ.

ಬೊಲೊರೋ ಚಾಲಕ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!