Monday, June 17, 2024
Homeಕರಾವಳಿಕಾಸರಗೋಡು: ಮೂರು ಕಾರುಗಳ ನಡುವಿನ ಸರಣಿ ಅಪಘಾತ- ಮೂವರಿಗೆ ಗಾಯ

ಕಾಸರಗೋಡು: ಮೂರು ಕಾರುಗಳ ನಡುವಿನ ಸರಣಿ ಅಪಘಾತ- ಮೂವರಿಗೆ ಗಾಯ

spot_img
- Advertisement -
- Advertisement -

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್‌‌ನಲ್ಲಿ ಮೂರು ಕಾರುಗಳ ನಡುವಿನ ಸರಣಿ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮೊಗ್ರಾಲ್ ಪುತ್ತೂರಿನ ಜಗದೀಶ್ (30) ಬಾಲಕೃಷ್ಣ (50) ಮತ್ತು ಬದ್ರಿಯಾ ನಗರದ ಮುರ್ಷಿದ್ ( 22) ಗಾಯಗೊಂಡವರು.

ಕುಂಬಳೆ ಕಡೆಗೆ ತೆರಳುತ್ತಿದ್ದ ಆಲ್ಟೊ ಕಾರಿಗೆ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದ್ದು, ಹಿಂದಿನಿಂದ ಬಂದ ವ್ಯಾಗನರ್ ಕಾರು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!