Monday, June 8, 2026
Homeತಾಜಾ ಸುದ್ದಿಸುಳ್ಯ: ಕಾರುಗಳ ನಡುವೆ ಪರಸ್ಪರ ಡಿಕ್ಕಿ- ಪ್ರಯಾಣಿಕರು ಅಪಾಯದಿಂದ ಪಾರು

ಸುಳ್ಯ: ಕಾರುಗಳ ನಡುವೆ ಪರಸ್ಪರ ಡಿಕ್ಕಿ- ಪ್ರಯಾಣಿಕರು ಅಪಾಯದಿಂದ ಪಾರು

- Advertisement -
- Advertisement -

ಸುಳ್ಯ: ಕಾರುಗಳ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡು, ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸುಳ್ಯದ ಪೈಚಾರು ಬಳಿ ಗುರುವಾರದಂದು ನಡೆದಿದೆ.

ಎರಡೂ ಕಾರುಗಳು ಜಾಲ್ಸೂರು ಕಡೆಯಿಂದ ಬರುತ್ತಿದ್ದು, ಎದುರಿನಲ್ಲಿದ್ದ ಮಾರುತಿ ಕಾರು ಪೈಚಾರು ಬಳಿ ಮನೆಯೊಂದರ ಸಮೀಪಕ್ಕೆ ತಿರುಗಿಸಿದಾಗ ಹಿಂದಿನಿಂದ ವೇಗವಾಗಿ ಬಂದ ಕಾಸರಗೋಡು ಮೂಲದ ಮಾರುತಿ ಸಿಯಸ್ ಕಾರು ನಿಯಂತ್ರಣ ತಪ್ಪಿ ಮಾರುತಿ ಕಾರಿಗೆ ಡಿಕ್ಕಿ ಹೊಡೆದು ಪಕ್ಕದ ಸಣ್ಣ ಜರಿಗೆ ಗುದ್ದಿ ರಸ್ತೆಬದಿಯ ಚರಂಡಿಗೆ ವಾಲಿಕೊಂಡು ನಿಂತಿದೆ ಎನ್ನಲಾಗಿದೆ.

ಘಟನೆಯಿಂದ ಮಾರುತಿ ಸಿಎಸ್ ಕಾರು ಸಂಪೂರ್ಣ ಜಖಂಗೊಂಡಿದ್ದು, ಎರಡೂ ವಾಹನದ ಸವಾರರು ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!