Saturday, October 17, 2026
Homeಇತರಮೂಡಬಿದಿರೆ: ಪೊಲೀಸ್ ಜೀಪ್ ಹಾಗು ಬೈಕ್ ನಡುವೆ ಡಿಕ್ಕಿ...! ಬೈಕ್ ಸವಾರನಿಗೆ ಗಂಭೀರ ಗಾಯ..!

ಮೂಡಬಿದಿರೆ: ಪೊಲೀಸ್ ಜೀಪ್ ಹಾಗು ಬೈಕ್ ನಡುವೆ ಡಿಕ್ಕಿ…! ಬೈಕ್ ಸವಾರನಿಗೆ ಗಂಭೀರ ಗಾಯ..!

- Advertisement -
- Advertisement -

ಮೂಡಬಿದಿರೆ: ಮೂಡಬಿದಿರೆಯ ವಿದ್ಯಾಗಿರಿ ಬಳಿ ಪೊಲೀಸ್ ಇಲಾಖೆಯ ಜೀಪೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಮಾರ್ಪಾಡಿ ಗ್ರಾಮದ ಮರಿಯಾಡಿ ನಿವಾಸಿ ಬಾವು ಬ್ಯಾರಿ ಎಂದು ಗುರುತಿಸಲಾಗಿದೆ. ಈತ ಕೂಲಿ ಕಾರ್ಮಿಕನಾಗಿದ್ದು ಮೂಡುಬಿದಿರೆಯಿಂದ ಹಂಡೇಲು ಕಡಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.

ಮರಳು ತುಂಬಿಸಿಕೊಂಡು ಹೋಗುತ್ತಿದ್ದ ಟಿಪ್ಪರನ್ನು ಬೆನ್ನತ್ತಿಕೊಂಡು ಪೊಲೀಸ್ ಜೀಪು ಬರುತ್ತಿದ್ದ ಸಂದರ್ಭದಲ್ಲಿ ಬೈಕ್ ಡಿಕ್ಕಿ ಹೊಡೆದಿದೆ.

- Advertisement -

Latest News

error: Content is protected !!