- Advertisement -
- Advertisement -
ಉಡುಪಿ : ಉದ್ಯಾವರದಲ್ಲಿ ಈಚರ್ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ ನಗರದ ಹೊರವಲಯದ ಉದ್ಯಾವರ ಬಲೈಪಾದೆ ಬಳಿ ನಡೆದಿದೆ.ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಬೈಕ್ ಸವಾರ.

ಪ್ಲೈವುಡ್ ಕೊಂಡೊಯ್ಯುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ ಪರಿಣಾಮ ಬೈಕನ್ನು ಸ್ವಲ್ಪ ದೂರದವರೆಗೆ ಲಾರಿ ಎಳೆದೊಯ್ದಿದೆ. ಈ ವೇಳೆ ಬೆಂಕಿ ಕಾಣಿಸಿಕೊಂಡು ವಾಹನಗಳು ಎರಡೂ ವಾಹನಗಳು ಸುಟ್ಟು ಕರಕಲಾಗಿವೆ. ಮಧ್ಯರಾತ್ರಿ 1-30ರ ವೇಳೆಗೆ ಈ ರಸ್ತೆ ಅಪಘಾತ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
- Advertisement -