Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು: ಆಟೋರಿಕ್ಷಾ ಹಾಗೂ ಮಿನಿ ಲಾರಿ ನಡುವೆ ಅಪಘಾತ- ಯುವಕ ಸಾವು

ಕಾಸರಗೋಡು: ಆಟೋರಿಕ್ಷಾ ಹಾಗೂ ಮಿನಿ ಲಾರಿ ನಡುವೆ ಅಪಘಾತ- ಯುವಕ ಸಾವು

- Advertisement -
- Advertisement -

ಕಾಸರಗೋಡು: ಆಟೋ ರಿಕ್ಷಾ ಹಾಗೂ ಮಿನಿ ಲಾರಿ ನಡುವೆ ನಡೆದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ರಾಜ್ಯ ಹೆದ್ದಾರಿಯ ಉದುಮದಲ್ಲಿ ನಡೆದಿದೆ. ಮೃತ ಪಟ್ಟ ಯುವಕನ ತಂದೆಯೂ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಸರಗೋಡು ಅಣಂಗೂರು ಟಿಪ್ಪು ನಗರದ ಬಿ. ಎ ಅಮೀರ್ (26) ಮೃತಪಟ್ಟವರು. ತಂದೆ ಮುಹಮ್ಮದ್ ಕುಂಞಿ ಗಂಭೀರ ಗಾಯ ಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ತರಕಾರಿ ಹೋಲ್ ಸೇಲ್ ಮಾರಾಟ ನಡೆಸುತ್ತಿದ್ದು, ಬೆಳಿಗ್ಗೆ ತರಕಾರಿ ತರಲು ಆಟೋ ರಿಕ್ಷಾದಲ್ಲಿ ಕಾಞಂಗಾಡ್ ಗೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದ್ದು, ನಜ್ಜು ಗುಜ್ಜಾದ ಆಟೋ ರಿಕ್ಷಾ ದಲ್ಲಿ ಸಿಲುಕಿದ್ದ ಇಬ್ಬರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹೊರ ತೆಗೆದು ಆಸ್ಪತ್ರೆಗೆ ತಲಪಿಸಿದರೂ ಅಮೀರ್ ಆಗಲೇ ಮೃತಪಟ್ಟಿದ್ದರು.

ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.

- Advertisement -

Latest News

error: Content is protected !!