Tuesday, May 21, 2024
Homeಕರಾವಳಿಲಾಕ್ ಡೌನ್ ಅವಧಿಯಲ್ಲಿ ಕರಾವಳಿಯ ಭಾಷಾ ಅಕಾಡೆಮಿಯ ಅಧ್ಯಕ್ಷರಿಂದ ಪ್ರಯಾಣ ಭತ್ತೆ ಸ್ವೀಕಾರ?

ಲಾಕ್ ಡೌನ್ ಅವಧಿಯಲ್ಲಿ ಕರಾವಳಿಯ ಭಾಷಾ ಅಕಾಡೆಮಿಯ ಅಧ್ಯಕ್ಷರಿಂದ ಪ್ರಯಾಣ ಭತ್ತೆ ಸ್ವೀಕಾರ?

spot_img
- Advertisement -
- Advertisement -

ಮಂಗಳೂರು: ಬಾಷಾ ಅಕಾಡೆಮಿಗಳ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಜಗದೀಶ್ ಪೈ, ರಹೀಂ ಉಚ್ಚಿಲ ಅವರು ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಿಯೂ ಪ್ರಯಾಣಿಸದೆ ತಿಂಗಳಿಗೆ ಬರೋಬ್ಬರಿ 30000 ಸಾವಿರ ರೂಪಾಯಿಯಂತೆ ಎರಡೂವರೆ ತಿಂಗಳು ಒಟ್ಟು 75000 ಪ್ರಯಾಣ ಭತ್ತೆ ಪಡೆದುಕೊಂಡ ಬಗ್ಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಸಾಹಿತಿ ಡಾಕ್ಟರ್ ಅರವಿಂದ ಚಂದ್ರಕಾಂತ ಶಾನುಭಾಗ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯನ್ನು ಹಂಚಿ ಕೊಂಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಯಾವುದೇ ಅಕಾಡೆಮಿಗಳಿಗೆ ಕಾರ್ಯಕ್ರಮಕ್ಕಾಗಲಿ ಅಥವಾ ಕಚೇರಿ ತೆರೆಯಲೂ ಕೂಡ ಅವಕಾಶವಿರಲಿಲ್ಲ.ಆದರೆ, ತುಳು ಕೊಂಕಣಿ ಹಾಗೂ ಬ್ಯಾರಿ ಅಕಾಡೆಮಿಯ ಅಧ್ಯಕ್ಷರು ಮನೆಯಲ್ಲೇ ಕುಳಿತು ಸಾಹಿತ್ಯಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಮೊತ್ತದ ಪ್ರಯಾಣ ಭತ್ತೆಯನ್ನು ಪಡೆದಿದ್ದಾರೆ ಎಂದು ಅವರು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

ಈ ಅಧ್ಯಕ್ಷರುಗಳಿಗೆ ತಿಂಗಳಿಗೆ 30, 000 ರೂಪಾಯಿ ಪ್ರಯಾಣ ಭತ್ಯೆ, ದೂರವಾಣಿ ಬಾಬ್ತು 3,000 ರೂಪಾಯಿ, ಮಾಸಿಕ ಗೌರವ ಸಂಭಾವನೆ 25,000 ರೂಪಾಯಿ ನೀಡಲಾಗುತ್ತದೆ. 60,000 ರೂಪಾಯಿ ಪಡೆದುಕೊಂಡು ಇವರು ನಡೆಸುವ ಕೆಲಸಗಳೇನು ಎಂಬುದು ಜನರ ಪ್ರಶ್ನೆಯಾಗಿದೆ.

ಇನ್ನು ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ದಯಾನಂದ ಕತ್ತಲ್ ಸಾರ್, ಅಧ್ಯಕ್ಷರಿಗೆ ಬರುವ ಗೌರವಧನವನ್ನು ನಾನು ಪಡೆದಿದ್ದೇನೆಯೇ ಹೊರತು ಅಕಾಡೆಮಿಯ ನಯಾಪೈಸೆ ಕೂಡ ಸ್ವಂತಕ್ಕೆ ಬಳಸಿಲ್ಲ.ಇದಕ್ಕೆ ಸಂಬಂಧಿಸಿದ ಯಾವುದೇ ತನಿಖೆಗೆ ಹಾಜರಾಗಲು ನಾನು ಸಿದ್ದನಿದ್ದೇನೆ ಎಂದಿದ್ದಾರೆ.

ಬ್ಯಾರಿ ಅಕಾಡೆಮಿಯಾ ಅಧ್ಯಕ್ಷ ರಹೀಮ್ ಉಚ್ಚಿಲ್ ಹಣವನ್ನು ದುಂದುವೆಚ್ಚ ಮಾಡಿರುವ ಆರೋಪ ಸಾಬೀತಾದರೆ ರಾಜೀನಾಮೆ ಕೊಡಲು ಸಿದ್ದನಿದ್ದೇನೆ ಎಂದಿದ್ದು, ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ.ಜಗದೀಶ್ ಪೈ ರವರು,ಈ ಪ್ರಕರಣವು ರಾಜ್ಯ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು,ಯಾವುದೇ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

- Advertisement -
spot_img

Latest News

error: Content is protected !!