Thursday, June 4, 2026
Homeಕರಾವಳಿಬಂಟ್ವಾಳ;ವ್ಯಕ್ತಿಯ ಕೈ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಬಂಧನ

ಬಂಟ್ವಾಳ;ವ್ಯಕ್ತಿಯ ಕೈ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಬಂಧನ

- Advertisement -
- Advertisement -

ಬಂಟ್ವಾಳ: ಯುವತಿಯ ವಿಚಾರಕ್ಕೆ ಜಗಳ ನಡೆದು  ವ್ಯಕ್ತಿಯ ಕೈ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತ್ರತ್ವದಲ್ಲಿ ಎಸ್.ಐ.ಅವಿನಾಶ್ ಅವರ ತಂಡ ಬಂಧಿಸಿದೆ. ಸಂತೋಷ್ ಬಂಧಿತ ಆರೋಪಿ. ಮೇ.21 ರಂದು ಸಂತೋಷ್ ಬಂಟ್ವಾಳ ನಿವಾಸಿ ಶಿವರಾಜ್ ಕುಲಾಲ್ ಎಂಬಾತನ ಕೈಯನ್ನು ಕತ್ತರಿಸಿ ಪರಾರಿಯಾಗಿದ್ದ.

ಸಂತೋಷ್ ಎಂಬಾತನ ಅಕ್ಕನ ವಿಚಾರದಲ್ಲಿ ಶಿವರಾಜ್ ನಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ಕತ್ತಿಯಿಂದ ಕಡಿದಿದ್ದ.ಆದರೆ ಶಿವರಾಜ್ ಕೈಯನ್ಜು ಅಡ್ಡಹಿಡಿದ ಪರಿಣಾಮವಾಗಿ ಕೈಯ ಕೈ ತುಂಡಾಗಿ ಬಿದ್ದಿದೆ. ಕೂಡಲೇ ಶಿವರಾಜ್ ಆತನ ಸ್ನೇಹಿತರ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ ಆದರೂ ಕೈಯನ್ನು ಜೋಡಿಸುವಲ್ಲಿ ವಿಫಲವಾಗಿದೆ.

ಆದರೆ ಘಟನೆ ನಡೆದ ಬಳಿಕ ಸಂತೋಷ್ ತಲೆಮರೆಸಿಕೊಂಡು ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ.ಇಂದು ಸಂಜೆ ನಗರ ಠಾಣಾ ಪೋಲೀಸರ ತಂಡ ಆತನನ್ನು ಬಂಧಿಸಿದೆ.ಎಸ್.ಐ.ರಾಮಕೃಷ್ಣ ಅವರ ಜೊತೆ ಅಪರಾಧ ವಿಭಾಗದ ರಾಜೇಶ್ ಮತ್ತು ಇರ್ಶಾದ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!