Friday, June 5, 2026
Homeಕರಾವಳಿಮಂಗಳೂರುಬಂಟ್ವಾಳ: ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಬಂಟ್ವಾಳ, ಕನ್ಯಾನ ನಿವಾಸಿ ಆನಂದ (39) ಎಂಬವರಿಗೆ ದಿನಾಂಕ:16-09-2020 ರಂದು ಆರೋಪಿಗಳಾದ ಅಜೀಝ್, ತೋಯಿಬ್ ,ಆಶೀಪ್ ,ಕಲೀಲ್, ಅಜೀಝ್ ಹಾಗೂ ಇತರರು ಸೇರಿ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪೈಕಿ ಬಂಟ್ವಾಳ, ಕನ್ಯಾನ ನಿವಾಸಿ ಮೊಯಿದ್ದೀನ ಶಾಕೀರ್ ಯಾನೆ ಮೊಯಿದ ಶಾಕೀರ (27) ಎಂಬಾತನು ಮಾನ್ಯ ನ್ಯಾಯಾಲಯಕ್ಕೆವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ವಿದೇಶಕ್ಕೆ ತೆರಳಿರುತ್ತಾನೆ. ಸದ್ರಿ ಆರೋಪಿ ಮೇಲೆ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಜಾರಿಯಾಗಿರುತ್ತದೆ. ದಿನಾಂಕ:13.11.2025 ರಂದು ಪ್ರಕರಣದ ಸದ್ರಿ ಆರೋಪಿಯನ್ನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸ್ತಗಿರಿ ಮಾಡಿ, ದಿನಾಂಕ:14.11.2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಲಯವು ಆರೋಪಿಯನ್ನು ಸೂಕ್ತ ಜಾಮೀನಿನೊಂದಿಗೆ ಬಿಡುಗಡೆ ಮಾಡಿರುತ್ತದೆ.

- Advertisement -

Latest News

error: Content is protected !!