ಪುತ್ತೂರು: ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಮಸ್ಕತ್‌ನ ರೂವಿ ಅಲ್ ಫಲಾಜ್ ಹೊಟೇಲ್ ಗ್ರ್ಯಾಂಡ್ ಸಭಾಂಗಣದಲ್ಲಿ ಎ. 19ರಂದು ಅಪರಾಹ್ನ 3.15ರಿಂದ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕದ ನಿತಿನ್ ತೆಂಕಕಾರಂದೂರು ವಿರಚಿತ, ಯೋಗೀಶ್ ಕುಮಾರ್ ಚಿಗುರುಪಾದೆ ಪದ್ಯ ರಚನೆಯ 225ನೇ ಪ್ರಯೋಗದ ಪ್ರದರ್ಶನ ನಡೆಯಲಿದೆ.
ಈ ಕುರಿತು ಮೇಳದ ವ್ಯವಸ್ಥಾಪಕ ಪ್ರಶಾಂತ್ ಪೂಜಾರಿ, ‘ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬಾೖಯಲ್ಲಿ ಮಾತೆ ದೇಯಿ ಬೈದೇತಿ ಮತ್ತು ಧೂಮಾವತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ ನೆಲದಲ್ಲಿ ಪ್ರದರ್ಶನ ನೀಡುತ್ತಿರುವುದು ಯಕ್ಷರಂಗದ ಇತಿಹಾಸದಲ್ಲಿ ಪ್ರಥಮವೆನಿಸಿದೆ,’ ಎಂದು ತಿಳಿಸಿದ್ದಾರೆ.
ಎ. 20ರಂದು ಬಿಲ್ಲವ ಫ್ಯಾಮಿಲಿ ದುಬಾೖ ಕೂಟದ ವತಿಯಿಂದ ಬರ್ ದುಬಾೖಯ ಜದಫ್ ಸ್ವಿಸ್ ಇಂಟರ್ ನ್ಯಾಶನಲ್ ಸೈಂಟಿಫಿಕ್ ಸ್ಕೂಲ್‌ನ ಹಾಲ್‌ನಲ್ಲಿ ಸಂಜೆ 5ರಿಂದ 226ನೇ ಪ್ರಯೋಗದ ಯಕ್ಷಗಾನ ಪ್ರದರ್ಶನ ಕಾಣಲಿದೆ