Friday, April 26, 2024
Homeಕ್ರೀಡೆತನ್ನೆಲ್ಲ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ತಿಳಿಸಿದ ಎಬಿ ಡಿವಿಲಿಯರ್ಸ್

ತನ್ನೆಲ್ಲ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ತಿಳಿಸಿದ ಎಬಿ ಡಿವಿಲಿಯರ್ಸ್

spot_img
- Advertisement -
- Advertisement -

ಕೇಪ್‍ಟೌನ್: ಸೌತ್ ಆಫ್ರಿಕಾದ ಮಾಜಿ ಆಟಗಾರ ಮತ್ತು ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಡಿವಿಲಿಯರ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವಿಚಾರವಾಗಿ ಪತ್ನಿ ಮತ್ತು ಮಗುವಿನ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ವಿಲಿಯರ್ಸ್, ನವೆಂಬರ್ 11 ರಂದು ನಾವು ಸುಂದರವಾದ ಹೆಣ್ಣು ಮಗುವನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಯೆಂಟೆ ಡಿವಿಲಿಯರ್ಸ್, ಅಶೀವಾದದೊಂದಿಗೆ ನೀನು ನಮ್ಮ ಮನೆಗೆ ಪರ್ಫೆಕ್ಟ್ ಅಡಿಕ್ಷನ್. ನೀನು ಹುಟ್ಟಿದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಮಗುವಿನ ಹೆಸರನ್ನು ಯೆಂಟೆ ಡಿವಿಲಿಯರ್ಸ್ ಎಂದು ತಿಳಿಸಿದ್ದಾರೆ.

ಈಗಾಗಲೇ ವಿಲಿಯರ್ಸ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಈಗ ಹೆಣ್ಣು ಮಗು ಜನಿಸುವ ಮೂಲಕ ಮೂರನೇ ಮಗುವಿಗೆ ಎಬಿಡಿ ವೆಲ್‍ಕಮ್ ಹೇಳಿದ್ದಾರೆ.

ಪ್ರತಿ ಬಾರಿ ಐಪಿಎಲ್ ನಡೆದಾಗ ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಕುಟುಂಬ ಸಮೇತ ಮೈದಾನಕ್ಕೆ ಬಂದು ಆರ್‌ಸಿಬಿ ತಂಡಕ್ಕೆ ಚೀಯರ್ ಮಾಡುತ್ತಿದ್ದರು. ಈ ಬಾರಿ ಡೇನಿಯಲ್ ತುಂಬು ಗರ್ಭಿಣಿಯಾದ ಕಾರಣ ಯುಎಇಗೆ ಬಂದಿರಲ್ಲ. ಈ ಹಿಂದೆ ಡೇನಿಯಲ್ ಹಾಕಿದ್ದ ಗರ್ಭಿಣಿಯ ಫೋಟೋವೊಂದಕ್ಕೆ ಕಮೆಂಟ್ ಮಾಡಿದ್ದ ಅನುಷ್ಕಾ ಶರ್ಮಾ ಒಳ್ಳೆಯ ಸುದ್ದಿ ನಿಮಗೆ ಶುಭಾಶಯ ಎಬಿಡಿ ಮತ್ತು ಡೇನಿಯಲ್ ಎಂದು ಕಮೆಂಟ್ ಮಾಡಿದ್ದರು.

- Advertisement -
spot_img

Latest News

error: Content is protected !!