Friday, May 10, 2024
Homeಕರಾವಳಿಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

spot_img
- Advertisement -
- Advertisement -

ಉಳ್ಳಾಲ: ಮನೆ ಕೆಲಸಕ್ಕಿದ್ದ ಯುವತಿಯೋರ್ವಳು ನಾಪತ್ತೆಯಾಗಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ಯುವತಿ ಹಾವೇರಿ ಸವಣೂರು ಮಾರುತಿಪುರ ನಿವಾಸಿ ಪೂಜಾ ಲಮಾಣಿ (20).

ಘಟನೆಯ ವಿವರ: ಕೊಣಾಜೆ ಕಕ್ಕೆಮಜಲಿನಲ್ಲಿ ವಾಸವಿರುವ ಕುಟುಂಬವೊಂದು ಅನಾರೋಗ್ಯದಲ್ಲಿರುವ ಪ್ರಾಯಸ್ತರನ್ನು ನೋಡಿಕೊಳ್ಳಲು ಮಾತಾ ಸೊಲ್ಯೂಷನ್ಸ್ ಎಂಬ ಏಜೆನ್ಸಿ ಮೂಲಕ ಯುವತಿಯೋರ್ವಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು, ತಿಂಗಳಿಗೆ 20,000 ರೂ ಏಜೆನ್ಸಿಗೆ ಪಾವತಿಸುತ್ತಿದ್ದರು.

ಆಕರಯು ಫೆ.1 ರಂದು ಸಂಜೆ 3 ಕ್ಕೆ ಮನೆಯಿಂದ ಹೊರಗೆ ಹೋದವರು ನಂತರ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!