Sunday, June 7, 2026
Homeಕರಾವಳಿಸುಳ್ಯ:ಶಿಕಾರಿಗೆಂದು ಹೋಗಿ ಗುಂಡು ಹೊಡೆಸಿಕೊಂಡ ಯುವಕ- ಬಂದೂಕು ಸಹಿತ ಮೂವರನ್ನು ಬಂಧಿಸಿದ ಪೊಲೀಸರು!..

ಸುಳ್ಯ:ಶಿಕಾರಿಗೆಂದು ಹೋಗಿ ಗುಂಡು ಹೊಡೆಸಿಕೊಂಡ ಯುವಕ- ಬಂದೂಕು ಸಹಿತ ಮೂವರನ್ನು ಬಂಧಿಸಿದ ಪೊಲೀಸರು!..

- Advertisement -
- Advertisement -

ಸುಳ್ಯ: ಇಲ್ಲಿನ ಅರಂತೋಡಿನಲ್ಲಿ ಶಿಕಾರಿಗೆಂದು ಹೋದ ನಾಲ್ವರು ಯುವಕರಲ್ಲಿ ಒಬ್ಬನಿಗೆ ಗುಂಡು ತಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆಗೆ ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದೂಕು ಸಹಿತ ಮೂವರನ್ನು ಬಂಧಿಸಿದ ಘಟನೆ ವರದಿಯಾಗಿದೆ.

ದೇರಾಜೆ ಸಮೀಪದ ಪೂಮಲೆ ಕಾಡಿಗೆ ಶಿಕಾರಿಗೆ ಹೋಗಿದ್ದಾಗ ಘಟನೆ ನಡೆದಿತ್ತು ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದತ್ತ ಜೊತೆಯಲ್ಲಿದ್ದ ವ್ಯಕ್ತಿ ಗುಂಡು ಹಾರಿಸಿದಾಗ ಅರಂತೋಡಿನ ಸತ್ಯಮೂರ್ತಿ ಎಂಬ ಯುವಕನಿಗೆ ಬಂದೂಕುನಿಂದ ಸಿಡಿದ ಗುಂಡುಗಳು ಎದೆ, ಹೊಟ್ಟೆ ಭಾಗಕ್ಕೆ, ಕೈ ಕಾಲುಗಳಿಗೆ ಹೊಕ್ಕಿದೆ. ಕೂಡಲೇ ಸುಳ್ಯ ಕೆವಿಜಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಶಸ್ತ್ರ ಚಿಕಿತ್ಸೆಯ ಮೂಲಕ ದೇಹ ಸೇರಿದ ಗುಂಡುಗಳನ್ನು ಹೊರತೆಗೆಯಲಾಗಿದೆ.

- Advertisement -

Latest News

error: Content is protected !!