- Advertisement -


- Advertisement -
ಮಂಗಳೂರು: ಜಲಪಾತದಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರಿಗೆ ಬಿದ್ದು ಸಾ*ವನ್ನಪ್ಪಿರುವ ಘಟನೆ ಬಜಪೆಯಲ್ಲಿ ಜರಿನಗರ ಜಲಪಾತದಲ್ಲಿ ನಡೆದಿದೆ. ಕಿನ್ನಿಕಂಬಳ ಸಮೀಪದ ಪೆರಾರದ ವಿನೋದ್ ಲೋಬೋ (34) ಮೃತ ಯುವಕ.
ವಿನೋದ್ ಅವರು ಬಜಪೆಯಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು. ಸಂಜೆ ವೇಳೆಗೆ ಇತರರ ಜತೆಗೂಡಿ ಜಲಪಾತಕ್ಕೆ ಸ್ನಾನ ಮಾಡಲು ತೆರಳಿದ್ದರು.- ಅಲ್ಲಿ ಜಾರಿ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಕಾರಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ವಿನೋದ್ ಅವರು ಪತ್ನಿ ಆಶಾ ಹಾಗೂ ಪುತ್ರಿಯನ್ನು ಆಗಲಿದ್ದಾರೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
- Advertisement -


