Wednesday, June 3, 2026
Homeಕರಾವಳಿಉಡುಪಿಕಾರ್ಕಳ: ಯುವಕನೊಬ್ಬನಿಗೆ ನಾಲ್ಕು ಮಂದಿ ಸೇರಿ ಹಲ್ಲೆ

ಕಾರ್ಕಳ: ಯುವಕನೊಬ್ಬನಿಗೆ ನಾಲ್ಕು ಮಂದಿ ಸೇರಿ ಹಲ್ಲೆ

- Advertisement -
- Advertisement -

ಕಾರ್ಕಳ: ಯುವಕನೊಬ್ಬನಿಗೆ ನಾಲ್ಕು ಮಂದಿ ಸೇರಿ ಹಲ್ಲೆ ಮಾಡಿರುವ ಘಟನೆ ಕಾರ್ಕಳ ಸಮೀಪದ ಕುಕ್ಕಂದೂರು ಗ್ರಾಮದಲ್ಲಿ ನಡೆದಿದೆ. ಕುಕ್ಕಂದೂರು ಗ್ರಾಮದ ಸುರೇಶ್ (28) ಹಲ್ಲೆಗೊಳಗಾದವರು. ಶಿವರಾಜ್‌, ಶಶಿಕಿರಣ, ಹೇಮಂತ್‌, ವಿಜೇಶ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ :

ಆರೋಪಿಗಳಾದ 1. ಶಿವರಾಜ್‌, 2.ಶಶಿಕಿರಣ, 3.ಹೇಮಂತ್‌, 4.ವಿಜೇಶ್, ಇವರು , ದಿನಾಂಕ 23/11/2025 ರಂದು ಬೆಳಗಿನ ಜಾವ 01:00 ಗಂಟೆಗೆ ದೂರುದಾರ ಸುರೇಶ್‌ ಅವರ ಮನೆಯ ಬಳಿ ಬಂದು  ಮನೆಯಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನೀನು ಕಳ್ಳತನ ಮಾಡುತ್ತೀಯಾ ಎಂದು ಹೇಳಿ ಆರೋಪಿ ಶಿವರಾಜ್‌ ಈತನು ಮರದ ರೀಪಿನಿಂದ ಬೆನ್ನಿಗೆ ಕೈ ಕಾಲುಗಳಿಗೆ ಹಲ್ಲೆ ಮಾಡಿದ್ದಾನಂತೆಯ ಅಲ್ಲದೇ ಉಳಿದ ಆರೋಪಿಗಳು ಸೇರಿ ಸುರೇಶ್ ರನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಗಾಯಗೊಂಡ ಸುರೇಶ್ ಅವರು ದಿನಾಂಕ 26/11/2025 ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಒಳರೋಗಿಯಾಗಿ ದಾಖಲಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!