Tuesday, December 5, 2023
Homeತಾಜಾ ಸುದ್ದಿತೆಲುಗಿನ ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ ಯುವಕ: ಚಿಕಿತ್ಸೆ ಫಲಿಸದೇ ಸಾವು

ತೆಲುಗಿನ ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ ಯುವಕ: ಚಿಕಿತ್ಸೆ ಫಲಿಸದೇ ಸಾವು

- Advertisement -
- Advertisement -

ತುಮಕೂರು: ತೆಲುಗಿನ ಅರುಂಧತಿ ಸಿನಿಮಾದ ಪ್ರಭಾವಕ್ಕೆ ಒಳಗಾದ 22 ವರ್ಷದ ಯುವಕನೊಬ್ಬ ಮೈಗೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದ. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಂಡವಾಡ ಗ್ರಾಮದ  22 ವರ್ಷದ ರೇಣುಕ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೊದಲಿಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡ ರೇಣುಕಾ, ನಂತರ ಬೆಂಕಿ ಹಚ್ಚಿಕೊಂಡಿದ್ದಾನೆ. ಮೈಯೆಲ್ಲಾ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಕಿರುಚಲು ಪ್ರಾರಂಭಿಸಿದ್ದಾನೆ. ನೋವಿಂದ ಒದ್ದಾಡುತ್ತಾ ರಸ್ತೆ ಮೇಲೆಲ್ಲ ಉರುಳಾಡಿದ್ದಾನೆ.

ಅರುಂಧತಿ ಸಿನಿಮಾದಲ್ಲಿ ನಾಯಕಿ ಸತ್ತು, ಆಕೆ ಮೂಳೆಯಿಂದ ಮಾಡಿದ ಆಯುಧದಿಂದ ವಿಲನ್‌ನನ್ನು ಕೊಲ್ಲುವ ದೃಶ್ಯವಿದೆ. ಇದರಿಂದ ಆತ ಪ್ರಭಾವಿತನಾಗಿದ್ದ ಅಂತ ಹೇಳಲಾಗುತ್ತಿದೆ. ಅಲ್ಲಿನ ನಾಯಕಿಯಂತೆ ಸತ್ತು ಮುಕ್ತಿ ಪಡೆಯುತ್ತೇನೆ ಅಂತ ಹೇಳುತ್ತಿದ್ದ. ಆ ದೃಶ್ಯದಿಂದಲೇ ಪ್ರಭಾವಿತನಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

.

- Advertisement -
spot_img

Latest News

error: Content is protected !!