Saturday, June 13, 2026
Homeಕರಾವಳಿಮಂಗಳೂರುವಿಟ್ಲ; ರಾತ್ರಿಯಿಡೀ ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ ಯುವಕ; ಬೆಳಗ್ಗೆ ಆಕೆಯ ಭೇಟಿಗೆ ಬಂದಾಗ ಸಿಕ್ತು...

ವಿಟ್ಲ; ರಾತ್ರಿಯಿಡೀ ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ ಯುವಕ; ಬೆಳಗ್ಗೆ ಆಕೆಯ ಭೇಟಿಗೆ ಬಂದಾಗ ಸಿಕ್ತು ಬಿಸಿಬಿಸಿ ಕಜ್ಜಾಯ

- Advertisement -
- Advertisement -

ವಿಟ್ಲ; ರಾತ್ರಿಯಿಡೀ ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ ಯುವಕ  ಬೆಳಗ್ಗೆ ಆಕೆಯ ಭೇಟಿಗೆ ಬಂದಾಗ ಸಿಕ್ತು ಸಾರ್ವಜನಿಕರಿಂದ ಬಿಸಿಬಿಸಿ ಕಜ್ಜಾಯ ಸಿಕ್ಕಿದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.ಕನ್ಯಾನ ಸಮೀಪದ ಪಂಜಾಜೆ ನಿವಾಸಿ ಸವಾದ್(22)ಏಟು ತಿಂದ ಯುವಕ. ಈತ ಬೆಂಗಳೂರಿನ ಕೋರಮಂಗಲದ ಡ್ರೆಸ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ.

ಸವಾದ್ ಯುವತಿಯೋರ್ವಳ ನಂಬರ್ ಕೇಳಿದ್ದ. ಆದರೆ ಆಕೆ ಪರಿಚಯದ ಯುವಕನ ಮೊಬೈಲ್ ನಂಬರ್ ಕೊಟ್ಟಿದ್ದಳು. ಯುವತಿಯ ನಂಬರ್ ಎಂದು ತಿಳಿದಿದ್ದ ಆ ಯುವಕ ರಾತ್ರಿಯಿಡಿ ಆಶ್ಲೀಲ ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ತಡರಾತ್ರಿ ಬಳಿಕ ಬಟ್ಟೆ ಬಿಚ್ಚಿ ವೀಡಿಯೋ ಕಾಲ್ ಮಾಡುವಂತೆ ಪದೇ ಪದೇ ಮೆಸೇಜ್ ಮೂಲಕ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ. ಆ ಬಳಿಕ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಸವಾದ್ ಭೇಟಿಯಾಗಲೆಂದು ಕೆಲಸಕ್ಕೆ ರಜಾ ಹಾಕಿ ಕುಡ್ತಮುಗೇರು ಎಂಬಲ್ಲಿಗೆ ಬಂದಾಗ ಸ್ಥಳೀಯರು ಆತನನ್ನು ಹಿಡಿದು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇನ್ನು ಈತ ಬೆಂಗಳೂರಿನ ಕೋರಮಂಗಲದಲ್ಲಿ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!