Saturday, June 29, 2024
Homeಕರಾವಳಿಸುಳ್ಯ: ಹರಿಹರದಲ್ಲಿ ನದಿಗೆ ಬಿದ್ದ ಕ್ರೇನ್ ಆಪರೇಟರ್ ನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ:...

ಸುಳ್ಯ: ಹರಿಹರದಲ್ಲಿ ನದಿಗೆ ಬಿದ್ದ ಕ್ರೇನ್ ಆಪರೇಟರ್ ನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ: ಯುವಕನ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

spot_img
- Advertisement -
- Advertisement -

ಸುಳ್ಯ: ನಿನ್ನೆ ಹರಿಹರ ಪಲ್ಲತಡ್ಕದಲ್ಲಿ ಪ್ರವಾಹ ಸ್ಥಳದಲ್ಲಿ ತೆರವು ಕಾರ್ಯ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ಕ್ರೇನ್ ಆಪರೇಟರ್ ಶರೀಫ್ ಅವರನ್ನು ತನ್ನ ಜೀವದ ಹಂಗು ತೊರೆದು ರಕ್ಷಿಸಿದ ಯುವಕ ಸೋಮಶೇಖರ್ ಕಟ್ಟೆಮನೆ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯ ಜಿಲ್ಲೆಯಲ್ಲಿ ಕೋಮು ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಣಗಾಡುತ್ತಿರುವ, ಧರ್ಮಗಳ ನಡುವೆ ದ್ವೇಷ ಕಿಚ್ಚು ಹೊತ್ತಿ ಉರಿಯುವ ಸಂದರ್ಭದಲ್ಲಿ ಸೋಮಶೇಖರ್ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬಂತೆ ಶರೀಫ್ ಅವರನ್ನು ರಕ್ಷಿಸಿದ್ದು ಅವರ ಕಾರ್ಯಕ್ಕೆ ಎಲ್ಲರೂ ಸಲಾಂ ಎಂದಿದ್ದಾರೆ. ಇಂತಹ ಘಟನೆಗಳು ಕೋಮು ಸೌಹಾರ್ದತೆ ಬೆಸೆಯುವ ಕೊಂಡಿಯಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

- Advertisement -
spot_img

Latest News

error: Content is protected !!