Friday, May 3, 2024
Homeಕರಾವಳಿವಿಟ್ಲ; ಸರ್ಕಾರಿ ವೈದ್ಯರ ಸಹಿಯನ್ನು ನಕಲು ಮಾಡಿ ಸಿಕ್ಕಿ ಬಿದ್ದ ಯುವಕ

ವಿಟ್ಲ; ಸರ್ಕಾರಿ ವೈದ್ಯರ ಸಹಿಯನ್ನು ನಕಲು ಮಾಡಿ ಸಿಕ್ಕಿ ಬಿದ್ದ ಯುವಕ

spot_img
- Advertisement -
- Advertisement -

ವಿಟ್ಲ: ಸರಕಾರಿ ವೈದ್ಯರೊಬ್ಬರ ಸಹಿಯನ್ನು ನಕಲು ಮಾಡಿ ಯುವಕನೊಬ್ಬ  ಸಿಕ್ಕಿ ಬಿದ್ದಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ನಕಲಿ ಸಹಿ ಹಾಗೂ ಸೀಲ್ ಬಳಸಿ ವಂಚನೆ‌ ಆರೋಪದಡಿ ಇದೀಗ ವಿಟ್ಲ ಶಾಲಾ ರಸ್ತೆ ನಿವಾಸಿ ಶೇಖ್ ಫಿರೋಜ್ ಆದಂ(26)ಎಂಬಾತನನ್ನು ಬಂಧಿಸಿದ್ದಾರೆ.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವೇದಾವತಿ ಅವರ ದೂರಿನ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಫಿರೋಜ್ ವಿಟ್ಲ ಪೋಲಿಸ್ ಠಾಣೆಯ ಮುಂಭಾಗದ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಮಾಲೀಕನ‌ ಪುತ್ರ.ಈತ ಲೈಸನ್ಸ್ ನವೀಕರಣಕ್ಕೆ ಸಂಬಂಧಿಸಿ ಈತ ವೈದ್ಯಾಧಿಕಾರಿಯ ಸಹಿ ನಕಲಿ‌ ಮಾಡಿರುವ ಆರೋಪ ಕೇಳಿ ಬಂದಿದೆ. ಆತ ಗ್ರಾಹಕನೋರ್ವನ ಫಿಟ್ ನೆಸ್ ಗಾಗಿ ವೈದ್ಯರ ನಕಲಿ ಸಹಿ ಬಳಸಿದ್ದಾನೆ ಎಂಬ ಆರೋಪದಲ್ಲಿ ಪೋಲೀಸರು ಬಂಧಿಸಿ‌ದ್ದಾರೆ.

- Advertisement -
spot_img

Latest News

error: Content is protected !!