Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪತಿ, ಅತ್ತೆ, ನಾದಿನಿಯಿಂದ ದೈಹಿಕ ಮಾನಸಿಕ ಹಿಂಸೆ; ವಿಷ ಸೇವಿಸಿ ಮಹಿಳೆ ಆತ್ಮಹ*ತ್ಯೆಗೆ...

ಬೆಳ್ತಂಗಡಿ : ಪತಿ, ಅತ್ತೆ, ನಾದಿನಿಯಿಂದ ದೈಹಿಕ ಮಾನಸಿಕ ಹಿಂಸೆ; ವಿಷ ಸೇವಿಸಿ ಮಹಿಳೆ ಆತ್ಮಹ*ತ್ಯೆಗೆ ಯತ್ನ

- Advertisement -
- Advertisement -

ಬೆಳ್ತಂಗಡಿ : ಪತಿಯ ದೈಹಿಕ ಹಲ್ಲೆ ಮತ್ತು ಅತ್ತೆ, ನಾದಿನಿಯ ನಿರಂತರ ಮಾನಸಿಕ ಕಿರುಕುಳದಿಂದ ನೊಂದ ಪತ್ನಿ ಬರೀರಾ(23) ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎರ್ಮಾಳಪಳಿಕೆ ಎಂಬಲ್ಲಿ ನಡೆದಿದ್ದು ಮಹಿಳೆ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಜೂರು ಜಿ.ನಗರ ನಿವಾಸಿ ಕೂಲಿ ಕಾರ್ಮಿಕ ಹಮೀದ್ ಅವರ ಪುತ್ರಿ ಬರೀರಾ(23) ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಎರ್ಮಾಳ್‌ಪಲ್ಕೆ ನಿವಾಸಿ ಫಾರೂಕ್ ಎಂಬಾತನಿಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಹಲವಾರು ಕನಸುಗಳನ್ನು ಹೊತ್ತು ಪತಿ ಮನೆ ಸೇರಿದ ಆಕೆಗೆ ಅಲ್ಲಿ ಪತಿಯ ನಿರಂತರ ಮಾನಸಿಕ ದೈಹಿಕ ಕಿರುಕುಳ, ಅತ್ತೆ ಮತ್ತು ನಾದಿನಿಯ ಮಾನಸಿಕ ಹಿಂಸೆ ಅತಿಯಾಗಿ ಜೀವನದ ಭರವಸೆ ಕಳೆದುಕೊಳ್ಳುವಂತಾಯಿತು.

ಇದೀಗ ಹಿಂಸೆ ಸಹಿಸದೆ ಆಕೆ ಪತಿಯಿಂದಲೇ ಹಲ್ಲೆಗೊಳಗಾಗಿ ಇರುವೆ ನಿಯಂತ್ರಣಕ್ಕೆ ಉಪಯೋಗಿಸುವ ವಿಷಪದಾರ್ಥ ಫೆ.18 ರಂದು ಸಂಜೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಂಗಳೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತನ್ನ ತಾಯಿ ಮತ್ತು ಸಹೋದರಿಯ ಒಪ್ಪಿಗೆ ಇಲ್ಲದೆ ಆತ ಆಕೆಗೆ ಯಾವುದೇ ಅನುಕೂಲಗಳನ್ನು ನೀಡುತ್ತಿರಲಿಲ್ಲ. ಖರ್ಚಿಗೆ ಒಂದು ರೂಪಾಯಿ ದುಡ್ಡೂ ನೀಡುತ್ತಿರಲಿಲ್ಲ. ಅಲ್ಲದೆ  ಏನಾದರೊಂದು ಕಾರಣ ಸೃಷ್ಟಿಸಿ ನಿತ್ಯ ಜಗಳವಾಡುವುದು. ಅದಕ್ಕೆ ತಾಯಿ ಮತ್ತು ಆತನ ಸಹೋದರಿ (ನಾದಿನಿ) ಕುಮ್ಮಕ್ಕು ನೀಡುತ್ತಿದ್ದುದರಿಂದ ಆಕೆ ಮಾನಸಿಕವಾಗಿ ಜರ್ಜರಿತಗೊಂಡು ಕೊನೇಗೆ ಈ ತೀರ್ಮಾನಕ್ಕೆ ಬಂದಿದ್ದರೆಂದು ತಿಳಿದುಬಂದಿದೆ. ಈ ಎಲ್ಲ ಬೆಳವಣಿಗೆಯಿಂದ ತವರು ಮನೆಯವರೂ ಬೇಸತ್ತಿದ್ದರು. ದಂಪತಿಗೆ ಒಂದು ಗಂಡು ಮಗು ಕೂಡ ಇದೆ. ಪತಿ ಹೆಲ್ಪ್‌ಲೈನ್ ಹೆಸರಿನ ಸಮಾಜ ಸೇವಾ ಗುಂಪುಗಳಲ್ಲಿ ಗುರುತಿಸಿಕೊಂಡವನಾಗಿದ್ದು ತನ್ನ ಪತ್ನಿಗೇ ನ್ಯಾಯವಿಲ್ಲದಂತಹ ಕೃತ್ಯವೆಸಗಿದ್ದಾನೆ. ಇದೀಗ ಗಂಭೀರ ಸ್ಥಿತಿಯಲ್ಲಿರುವ ಆಕೆ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!