Friday, June 5, 2026
Homeಕರಾವಳಿಕಾಲು ಜಾರಿ ಹಳ್ಳಕ್ಕೆ ಬಿದ್ದು ಮಹಿಳೆ ಮೃತ್ಯು..!

ಕಾಲು ಜಾರಿ ಹಳ್ಳಕ್ಕೆ ಬಿದ್ದು ಮಹಿಳೆ ಮೃತ್ಯು..!

- Advertisement -
- Advertisement -

ವಿಟ್ಲ: ಕಸಬಾ ಗ್ರಾಮದ ಕೊಲ್ಯ ಎಂಬಲ್ಲಿ ಮಹಿಳೆಯೋರ್ವರು ಕಲ್ಲಕಟ್ಟ ಹೊಳೆಯ ಕಿಂಡಿ ನೀರಿನ ಹಳ್ಳಕ್ಕೆ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆ ವಿಟ್ಲ ಕಸಬಾ ಗ್ರಾಮದ ಕೊಲ್ಯ ನಿವಾಸಿ ಸೀತಾರಾಮ ಶೆಟ್ಟಿಯವರ ಪತ್ನಿ ಚಂದ್ರಾವತಿ (65). ಇವರು ತಮ್ಮ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!