Thursday, June 4, 2026
Homeತಾಜಾ ಸುದ್ದಿಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವು

ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವು

- Advertisement -
- Advertisement -

ಕೇರಳ: ಇಲ್ಲಿನ ಮಲಪ್ಪುರಂನಲ್ಲಿ ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟ ಮಗು ಪೆರಿಂತಲಣ್ಣ ತೋಟದ ನಿವಾಸಿ ಸುಹೇಲ್ ಮತ್ತು ಜಮ್ಮಿಯಾ ದಂಪತಿಯ ಪುತ್ರ ಮಹಮ್ಮದ್ ಉಮರ್(2).

ಬಾಲಕನು ನಿನ್ನೆ ಬೆಳಗ್ಗೆ ಹಿತ್ತಲಿನಲ್ಲಿ ಆಟವಾಡುತ್ತಿದ್ದ ಸಂದರ್ಭಲ್ಲಿ ಹಾವು ಕಚ್ಚಿದೆ. ಪೋಷಕರು ಮಗುವಿನ ಅಳು ಕೇಳಿದ ಕೂಡಲೇ ಧಾವಿಸಿದ್ದು, ಆತನ ಕಾಲಿನಲ್ಲಿ ಹಾವು ಕಚ್ಚಿದ ಗುರುತುಗಳಿದ್ದವು. ತಕ್ಷಣ ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕರಿಸದೇ ರಾತ್ರಿ ಮಗು ಮೃತಪಟ್ಟಿದೆ.

- Advertisement -

Latest News

error: Content is protected !!