Sunday, June 7, 2026
Homeಕರಾವಳಿಮಂಗಳೂರುಬಂಟ್ವಾಳ; ಡಿವೈಎಸ್ಪಿ ಕಚೇರಿಗೆ ಮರ ಬಿದ್ದು ಅಪಾರ ಹಾನಿ

ಬಂಟ್ವಾಳ; ಡಿವೈಎಸ್ಪಿ ಕಚೇರಿಗೆ ಮರ ಬಿದ್ದು ಅಪಾರ ಹಾನಿ

- Advertisement -
- Advertisement -

ಬಂಟ್ವಾಳ; ಡಿವೈಎಸ್ಪಿ ಕಚೇರಿಗೆ ಮರ ಬಿದ್ದು ಅಪಾರ ಹಾನಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಸಹಿತ ಮಳೆಗೆ ಡಿವೈಎಸ್ಪಿ ಕಚೇರಿಯ ಛಾವಣಿಯ ಮೇಲೆ ತೆಂಗಿನ ಮರ ಬಿದ್ದಿದೆ.

ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕುಳಿತುಕೊಳ್ಳುವ ಕೊಠಡಿಯ ಛಾವಣಿ ಮೇಲೆ ಅಲ್ಲೇ ಅಂಗಳದಲ್ಲಿದ್ದ ಹಳೆಯ ತೆಂಗಿನ ಮರ ಬಿದ್ದಿದೆ. ಪರಿಣಾಮ ಹಂಚು ಹುಡಿ ಹುಡಿಯಾಗಿದೆ.
ರಾತ್ರಿ ಸುಮಾರು ‌ 9.30 ರವೇಳಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಡಿ.ವೈ.ಎಸ್.ಪಿ.ಯವರು ಕಚೇರಿಯೊಳಗೆ ಇಲ್ಲದೆ ಇದ್ದರಿಂದ ಅಪಾಯ ತಪ್ಪಿದೆ.ಅವರು ಕೆಲವೇ ಕ್ಷಣದ ಹಿಂದೆ ಕಚೇರಿಯಿಂದ ಹೊರಟು ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.ಇದೀಗ ಡಿ.ವೈ.ಎಸ್.ಪಿ.ಕಚೇರಿಯಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿದೆ.

- Advertisement -

Latest News

error: Content is protected !!