- Advertisement -
- Advertisement -
ಉಡುಪಿ: ಕಾರಿಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಕಾರು ಕಂದಕ್ಕೆ ಉರುಳಿದ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರು ಪೆಟ್ರೋಲ್ ಪಂಪ್ ನ ಬಳಿ ಇಂದು ಶುಕ್ರವಾರ ನಡೆದಿದೆ.
ಸಂತೆಕಟ್ಟೆಯ ಖಾಸಗಿ ಸೊಸೈಟಿಯ ಸಿಬ್ಬಂದಿ ಮೂವರು ಕಾರಿನಲ್ಲಿ ಉಡುಪಿಯಿಂದ ಸಂತೆಕಟ್ಟೆ ಶಾಖೆಗೆ ತೆರಳುತ್ತಿದ್ದಾಗ ಟಿಪ್ಪರ್ ಅನ್ನು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ನೇರ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಕಂದಕಕ್ಕೆ ಉರುಳಿ ಬಿದ್ದಿದ್ದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ .
ಈ ಅಪಘಾತಕ್ಕೆ ಟಿಪ್ಪರ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷವೇ ಕಾರಣ ಎಂದು ತಿಳಿದು ಬಂದಿದೆ.ಉಡುಪಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -