Monday, June 8, 2026
Homeಕರಾವಳಿಸುಳ್ಯ: ಒಂಟಿ ವೃದ್ಧೆಯಿದ್ದ ಮನೆಯೊಳಗೆ ನುಗ್ಗಿದ ಕಳ್ಳ: ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ

ಸುಳ್ಯ: ಒಂಟಿ ವೃದ್ಧೆಯಿದ್ದ ಮನೆಯೊಳಗೆ ನುಗ್ಗಿದ ಕಳ್ಳ: ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ

- Advertisement -
- Advertisement -

ಸುಳ್ಯ: ಒಂಟಿ ವೃದ್ಧೆಯಿದ್ದ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾದ ಘಟನೆ ನಿನ್ನೆ (ನ.28) ಬೆಳಗ್ಗೆ ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರ್ ಬೈತಡ್ಕ ವೈಲ್ಡ್ ಕೆಫೆ ಬಳಿ ನಡೆದಿದೆ.

ಬೈತಡ್ಕ ನಿವಾಸಿ ದಿವಂಗತ ಶಿವರಾಯರವರ ಪತ್ನಿ ಕಮಲ (64 ) ಒಬ್ಬರೇ ಮನೆಯಲ್ಲಿದ್ದಾಗ ಅಡ್ರೆಸ್‌ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ವೃದ್ದೆ ದೂರು ನೀಡಿದ್ದು, ಸುಳ್ಯ ಪೊಲೀಸರು ಕಳ್ಳನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!